ವೀರಮಲಕುನ್ನ್‌ನಲ್ಲಿ ಗುಡ್ಡೆ ಕುಸಿತ: ಹೆದ್ದಾರಿ ಸಂಚಾರ ವ್ಯತ್ಯಯ; ಸ್ಥಳಕ್ಕೆ ಅಧಿಕಾರಿಗಳ ಭೇಟಿ
ಕಾಸರಗೋಡು: ಚೆರುವತ್ತೂರು ಮಯ್ಯೀಚ ವೀರಮಲಕುನ್ನುನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಮಣ್ಣು ಕುಸಿದು ಬಿದ್ದ ಸ್ಥಳಕ್ಕೆ ಶಾಸಕ ಹಾಗೂ ಜಿಲ್ಲಾಧಿಕಾರಿ ಭೇಟಿ ನೀಡಿದರು. ಈ ಭಾಗದಲ್ಲಿ ಹೆದ್ದಾರಿ ಸಂಚಾರ ನಿಷೇಧಿಸಲಾಗಿದೆ. ಮಡಕ್ಕರ ಕೋಟಪುರಂ ಮೂಲಕ ನೀಲೇಶ್ವರಕ್ಕೆ ವಾಹನಗಳು ತೆರಳಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದ ಮಣ್ಣನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಜಿಲ್ಲಾಧಿಕಾರಿಯ ನಿರ್ದೇಶದಂತೆ ಎನ್‌ಡಿಆರ್‌ಎಫ್, ಅಗ್ನಿಶಾಮಕದಳ ಸ್ಥಳಕ್ಕೆ ತಲುಪಿದೆ. ಶಾಸಕ ರಾಜಗೋಪಾಲನ್, ಮಾಜಿ ಸಂಸದ ಪಿ. ಕರುಣಾಕರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ, ನೀಲೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಮಾಧವನ್ ಮಣಿಯರ, ಚೆರುವತ್ತೂರು ಪಂ. ಅಧ್ಯಕ್ಷೆ ಸಿ.ವಿ. ಪ್ರಮೀಳ, ಆರ್‌ಡಿಒ ಬಿನು ಜೋಸೆಫ್, ತಹಶೀಲ್ದಾರ್ ಜಿ. ಸುರೇಶ್ ಬಾಬು ಸ್ಥಳ ಸಂದರ್ಶಿಸಿದರು.