ವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರ ಅಪಹರಣ ಆರೋಪಿ ಸೆರೆ
ಕಣ್ಣೂರು: ನಡೆದುಕೊಂಡು ಹೋಗುತ್ತಿದ್ದ ವೃದ್ದೆಯ ಕುತ್ತಿಗೆಯಿಂದ 2 ಪವನ್ ತೂಕದ ಚಿನ್ನದ ಸರವನ್ನು ಹಿಡಿದೆಳೆದು ಪರಾರಿಯಾದ ಕಳ್ಳನನ್ನು ಗಂಟೆಗಳ ಮಧ್ಯೆ ಸೆರೆ ಹಿಡಿಯಲಾಗಿದೆ. ಚೀಲೇರಿ ಕನ್ನಾಟಿಪರಂಬ್ ನಿವಾಸಿ ಎಂ.ಎ. ಮುಸ್ತಫ (52)ನನ್ನು ವಳಪಟ್ಟಣಂ ಎಸ್‌ಐ ತಂಡ ಸೆರೆ ಹಿಡಿದಿದೆ. ನಿನ್ನೆ ಮಧ್ಯಾಹ್ನ 12.30ಕ್ಕೆ ಓಣಪರಂಬ್‌ನಲ್ಲಿ ಘಟನೆ ನಡೆದಿದೆ. ಸಿಸಿ ಟಿವಿ ದೃಶ್ಯದ ಆಧಾರದಲ್ಲಿ ಕಳ್ಳನ ಬಗ್ಗೆ ಮಾಹಿತಿ ಲಭಿಸಿತ್ತು.