ವೃದ್ಧೆಯನ್ನು ಕಟ್ಟಿಹಾಕಿ ೧೦ ಪವನ್ ಚಿನ್ನಾಭರಣ ದರೋಡೆ
ಕಣ್ಣೂರು: ವೃದ್ಧೆಯನ್ನು ಮನೆಯೊಳಗೆ ಕಟ್ಟಿಹಾಕಿದ ದರೋಡೆ ತಂಡವೊಂದು ಹತ್ತು ಪವನ್ ಚಿನ್ನಾ ಭರಣ ದೋಚಿದ ಘಟನೆ ಕಣ್ಣೂರಿನ ಪರಿಯಾರ ಎಂಬಲ್ಲಿ ನಡೆದಿದೆ.
ಪರಿಯಾರ ಬಳಿಯ ಅಮ್ಮಾ ನಪಾರ ಎಂಬಲ್ಲಿರುವ ಡಾ| ಶಕೀರ್ ಎಂಬವರ ಮನೆಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಡಾ| ಶಕೀರ್ ಹಾಗೂ ಪತ್ನಿ ನಿನ್ನೆ ರಾತ್ರಿ ೧೧ ಗಂಟೆ ವೇಳೆ ತಿರುವನಂತಪುರಕ್ಕೆ ತೆರಳಿದ್ದರು. ಅಂತರ ಮುಖವಾಡ ಧರಿಸಿದ ನಾಲ್ಕು ಮಂದಿ ತಂಡ ಮನೆಗೆ ನುಗ್ಗಿದೆ. ಮನೆಯಲ್ಲಿ ಡಾ| ಶಕೀರ್‌ರ ಸಂಬಂಧಿಕೆಯಾದ ವೃದ್ಧೆ ಹಾಗೂ ಇಬ್ಬರು ಪುಟ್ಟ ಮಕ್ಕಳು ಮಾತ್ರವೇ ಇದ್ದರು. ಮಕ್ಕಳು ಮನೆಯ ಮೇಲಿನ ಮಹಡಿಯಲ್ಲಿ ನಿದ್ರಿಸಿದ್ದರು. ಅವರು ಇಂದು ಬೆಳಿಗ್ಗೆ ಎದ್ದು ನೋಡಿದಾಗ ವೃದ್ಧೆಯನ್ನು ಕಟ್ಟಿಹಾಕಿ ಬಾಯಿಗೆ ಪ್ಲಾಸ್ಟರ್ ಅಂಟಿಸಿದ ಸ್ಥಿತಿಯಲ್ಲಿ ಕಂಡುಬಂದಿದೆ. ವೃದ್ಧೆ ದೇಹದಲ್ಲಿದ್ದ ಚಿನ್ನ ಹಾಗೂ ಕಪಾಟಿನಲ್ಲಿರಿಸಿದ್ದ ಚಿನ್ನವನ್ನು ತಂಡ ದರೋಡೆ ನಡೆಸಿದೆ.