ಹೊಸದುರ್ಗ: ವೆಳ್ಳರಿಕುಂಡ್ ಪನ್ನಿತ್ತಡಂ ನಿವಾಸಿ ಅಬುದಾಬಿಯಲ್ಲಿ ಮೃತಪಟ್ಟರು. ದಿ| ಕುಂಞಿರಾಮನ್- ಪದ್ಮಾವತಿ ದಂಪತಿಯ ಪುತ್ರನಾದ ಅನೀಶ್ ಕುಂಞಿರಾಮನ್ (46) ಮೃತಪಟ್ಟ ಯುವಕ. ಹೃದಯಾಘಾತ ನಿಧನಕ್ಕೆ ಕಾರಣವೆನ್ನಲಾಗಿದೆ. ಅಬುದಾಬಿ ಏರ್‌ಪೋರ್ಟ್ ಸಮೀಪದ ಕಲೀಫ ಸಿಟಿಯಲ್ಲಿ ಅನೀಶ್ ಕೆಲಸದಲ್ಲಿದ್ದರು. ಮೃತದೇಹವನ್ನು ಅಲ್ಲಿನ ಮಫ್ರಕ್ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಮೃತರು ಪತ್ನಿ ಕವಿತ, ಮಕ್ಕಳಾದ ಅನಘ, ಅಂಜನ, ಸಹೋದರ ಉಣ್ಣಿಕೃಷ್ಣನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
