ಕಾಸರಗೋಡು: ಕಜಕಿಸ್ತಾನದಲ್ಲಿ ಎಂಬಿಬಿಎಸ್ ಸೀಟು ನೀಡುವ ಭರವಸೆ ನೀಡಿ ಯುವತಿಯಿಂದ 6.53 ಲಕ್ಷ ರೂ. ಪಡೆದು ಬಳಿಕ ವಂಚನೆಗೈದ ದೂರಿನಂತೆ ತ್ರಿಕರಿಪುರ ಮಾಣಿಯಾಟ್‌ನ ಮೊಹಮ್ಮದ್ ಅಫ್ಸಲ್ ಎಂಬಾತನ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಹಣ ನಷ್ಟಗೊಂಡ ಫಾತಿಮತ್ ಯಾಸ್ಮಿನ್ ಎಂಬಾಕೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳು.