ವೈದ್ಯರನ್ನು ಬ್ಲಾಕ್‌ಮೇಲ್ ಗೊಳಿಸಿ 45 ಲಕ್ಷ ರೂ. ಎಗರಿಸಿದ ದೂರಿನಂತೆ ದಂಪತಿ ವಿರುದ್ಧ ಕೇಸು
ಕಾಸರಗೋಡು: ವೈದ್ಯರೋರ್ವರನ್ನು ಬ್ಲಾಕ್‌ಮೇಲ್‌ಗೊಳಿಸಿ ಅವರಿಂದ 45 ಲಕ್ಷ ರೂ. ಎಗರಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ನ್ಯಾಯಾಲಯದ ನಿರ್ದೇಶ ಪ್ರಕಾರ ದಂಪತಿ ವಿರುದ್ಧ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳನಾಡು ನಿವಾಸಿಗಳಾದ ಖದೀಜತ್ ರಿಶಾನಾ (35) ಮತ್ತು ಆಕೆಯ ಪತಿ ರೆಹ್ಮತ್ತುಲ್ಲ (41) ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. 2023 ರಲ್ಲಿ ಮೇಲ್ಪರಂಬ ಕೈನೋತ್ತ್‌ನ ಹೊಟೇಲೊಂದರಲ್ಲಿ ಆರೋಪಿಗಳು ತನ್ನನ್ನು ಪರಿಚಯಗೊಂಡು ಸೆಲ್ಫಿ ತೆಗೆದು ನಂತರ ಬ್ಲಾಕ್‌ಮೇಲ್ ಗೊಳಿಸಲಾರಂಭಿಸಿದರೆಂದು ದೂರಿನಲ್ಲಿ ವೈದ್ಯರು ಆರೋಪಿಸಿದ್ದಾರೆ.