ವೈದ್ಯರಿಗೆ ಬೀಳ್ಕೊಡುಗೆ
ಕಾಸರಗೋಡು: ವೈದ್ಯಕೀಯ ಸೇವೆಯಿಂದ ಇಂದು ನಿವೃತ್ತರಾಗಲಿ ರುವ ಡಾ|ಮುರಳೀಧರ ನಲ್ಲೂರಾ ಯರಿಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಕಾರ್ಯವೆಸಗುತ್ತಿರುವ ಎ.ಆರ್.ಟಿ. ಸೆಂಟರ್ನಲ್ಲಿ ಬೀಳ್ಕೊಡುಗೆ ನೀಡಲಾಯಿತು. ಜಿಲ್ಲಾ ಎಯ್ಡ್ ಕಂಟ್ರೋಲ್ ಆಫೀಸರ್, ಜಿಲ್ಲಾ ಟಿ.ಬಿ. ಅಧಿಕಾರಿ ಇತ್ಯಾದಿ ಹುದೆಗಳಲ್ಲಿ ಡಾ| ಮುರಳೀಧರ ನಲ್ಲೂರಾಯ ಸೇವೆ ಸಲ್ಲಿಸಿದ್ದಾರೆ. ಬೀಳ್ಕೊಡುಗೆ ಸಮಾರಂಭದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ| ರಾಮದಾಸ್ ಡಾ| ಮುರಳೀಧರ ನಲ್ಲೂರಾಯರಿಗೆ ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿದರು. ಎಆರ್ಟಿ ಸೆಂಟರ್ನ ನೋಡೆಲ್ ಅಧಿಕಾರಿ ಡಾ| ಸಿ.ಎಚ್. ಜನಾರ್ದನ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎನ್ಸಿಟಿ ನೋಡೆಲ್ ಆಫೀಸರ್ ಡಾ| ಪ್ರಸಾದ್, ತಾಯಿ-ಮಗು ಆಸ್ಪತ್ರೆಯ ಸುಪರಿಂಟೆಂಡೆಂಟ್ ಮಾಸ್ ಮೀಡಿಯಾ ಆಫೀಸರ್ ಲತೀಫ್, ಎಆರ್ಟಿ ಮೆಡಿಕಲ್ ಆಫೀಸರ್ ಡಾ| ಫಾತಿಮ ಮುಬೀನ ಮೊದಲಾದವರು ಮಾತನಾಡಿದರು. ಫಾರ್ಮಾಸಿಸ್ಟ್ ಸಿ.ಎ. ಯೂಸುಫ್ ಸ್ವಾಗತಿಸಿ, ಕೌನ್ಸಿಲರ್ ಅನಿಲ್ ಕುಮಾರ್ ವಂದಿಸಿದರು