ವೈದ್ಯ ದಂಪತಿಯ ಕಾರುಗಳಿಗೆ ಹಾನಿ

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯ ವೈದ್ಯ ಹಾಗೂ ಪತ್ನಿಯ ಕಾರುಗಳ ಗಾಜುಗಳನ್ನು ಕಲ್ಲು ಹಾಕಿ ಹಾನಿಗೊಳಿಸಿದ ಸ್ಥಿತಿ ಯಲ್ಲಿ ಪತ್ತೆಯಾಗಿದೆ. ಡಾ| ಅಭಿಜಿತ್‌ದಾಸ್, ಪತ್ನಿ ಡಾ| ದಿವ್ಯ ಎಂಬಿವರ ಕಾರುಗಳಿಗೆ ಹಾನಿಗೈಯ್ಯಲಾಗಿದೆ.  ಈ ಇಬ್ಬರು ವಾಸಿಸುವ ಕಾಞಂ ಗಾಡ್ ಉದಯಾಂಕುನ್ನುವಿನ ಬಾಡಿಗೆ ಮನೆ ಮುಂದೆ ಕಾರುಗಳನ್ನು ನಿಲ್ಲಿಸಲಾಗಿತ್ತು. ಡಾ| ಅಭಿಜಿತ್ ದಾಸ್‌ರ ಹೋಂಡಾ ಸಿಟಿ ಕಾರು, ಡಾ| ದಿವ್ಯಾರ ಆಲ್ಟೋ ಕಾರಿಗೆ ನಿನ್ನೆ ಮುಂಜಾನೆ 1 ಗಂಟೆ ವೇಳೆ  ಹಾನಿಗೊಳಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಲಪ್ಪುರಂ ಪರಪ್ಪ ನಂಗಾಡಿ ನಿವಾಸಿಯಾದ ಡಾ| ಅಭಿಜಿತ್‌ದಾಸ್ ಹಾಗೂ ಪತ್ನಿ ಆರು ತಿಂಗಳ ಹಿಂದೆ ಉದಯಾಂಕುನ್ನುವಿನ ಬಾಡಿಗೆ ಮನೆಯಲ್ಲಿ ವಾಸ ಆರಂಭಿಸಿ ದ್ದರ. ಕಾರುಗಳಿಗೆ  ಹಾನಿಗೈದ ಬಗ್ಗೆ ವೈದ್ಯರು ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page