ವ್ಯಕ್ತಿಯಿಂದ ರಸ್ತೆ ಸ್ವಾಧೀನ: ಅದಾಲತ್‌ನಲ್ಲಿ ಉಪ ಜಿಲ್ಲಾಧಿಕಾರಿಗೆ ಸ್ಥಳೀಯರಿಂದ ದೂರು
ಬದಿಯಡ್ಕ: ಗ್ರಾಮ ಭೇಟಿ ಕಾರ್ಯಕ್ರಮದಂಗವಾಗಿ ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೈನಿಕರ ಬದಿಯಡ್ಕ ವಿಲ್ಲೇಜ್ ಕಚೇರಿ ಸಂದರ್ಶಿಸಿದರು. ಈ ವೇಳೆ ವ್ಯಕ್ತಿಯೊಬ್ಬರು ರಸ್ತೆ ಸ್ವಾಧೀನ ಪಡಿಸಿದ ಬಗ್ಗೆ ಸ್ಥಳೀಯರು ದೂರು ನೀಡಿದರು. ಅಲ್ಲದೆ ಲೈಫ್ ಮಿಶನ್, ಪಟ್ಟೆ, ಬಿಪಿಎಲ್ ಕಾರ್ಡ್, ವಿದ್ಯುತ್ ಸಂಪರ್ಕ, ವೈದ್ಯಕೀಯ ನೆರವು, ಬೀಳಲು ಸಿದ್ಧವಾಗಿರುವ ಮರಗಳನ್ನು ಕಡಿದು ತೆರವುಗೊಳಿಸುವ ಬಗ್ಗೆ, ರಸ್ತೆ ಬದಿಯ ಬೋರ್ಡ್‌ಗಳಲ್ಲಿ ಕನ್ನಡ ಭಾಷೆಯನ್ನು ಸೇರಿಸುವುದು ಮೊದಲಾದವುಗಳ ಬಗ್ಗೆ ದೂರು ನೀಡಲಾಗಿದೆ. ಇದೆಲ್ಲ ಸೇರಿ ಒಟ್ಟು ನಲ್ವತ್ತು ದೂರುಗಳು ಸಹಾಯಕ ಜಿಲ್ಲಾಧಿಕಾರಿಗೆ ಲಭಿಸಿದೆ. ಈ ದೂರುಗಳ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ಸಂಬಂ ಧಪಟ್ಟವರಿಗೆ ಸಹಾಯಕ ಜಿಲ್ಲಾಧಿಕಾರಿ ನಿರ್ದೇಶ ನೀಡಿದರು.