ವ್ಯಕ್ತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕುಂಬಳೆ: ವ್ಯಕ್ತಿಯೋರ್ವರು ಮನೆಯೊಳಗೆ ನೇಣುಬಿಗಿದು ಸಾವಿ ಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಬಳೆ ಶಾಂತಿಪಳ್ಳ ಸಚಿನ್ ನಿಲಯದ ಸುಕುಮಾರನ್ (59) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ 2.30 ರ ವೇಳೆ ಇವರು ಮನೆಯ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಇವರು ಈ ಹಿಂದೆ ಲಾರಿ ಚಾಲಕನಾಗಿದ್ದರು.
ಮೃತರು ಪತ್ನಿ ಸುಜಾತ, ಮಕ್ಕಳದ ಸಚಿನ್, ಸ್ವಜನ, ಸೊಸೆ ಅಕ್ಷತಾ, ಸಹೋದರ-ಸಹೋದರಿಯರಾದ ರಾಮಚಂದ್ರ,ಕರುಣಾಕರ, ಶಶಿಧರ, ಪದ್ಮಾವತಿ, ಗಿರಿಜ, ಕಮಲಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.