ವ್ಯಕ್ತಿ ಮನೆಯೊಳಗೆ ನೇಣುಬಿಗಿದು ಸಾವು
ಕಾಸರಗೋಡು: ವ್ಯಕ್ತಿ ಮನೆಯೊ ಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದಾರೆ. ಚೆಂಗಳ ಬಾರಿ ಕ್ಕಾಡ್ ನಾಲ್ತಡ್ಕದ ಗೋಪಾಲನ್ (72) ಮೃತಪಟ್ಟ ವ್ಯಕ್ತಿ. ನಿನ್ನೆ ಮನೆಯಲ್ಲಿ ಬೇರೆ ಯಾರೂ ಇಲ್ಲದ ವೇಳೆ ಇವರು ನೇಣುಬಿಗಿದು ಸಾವಿಗೀಡಾಗಿದ್ದಾರೆನ್ನ ಲಾಗಿದೆ. ಮೃತದೇಹವನ್ನು ಮರಣೋ ತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ.
ಘಟನೆ ಬಗ್ಗೆ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತರು ಪತ್ನಿ ಮಾಧವಿ, ಮಕ್ಕಳಾದ ವಿನೋದ್, ಬಿಂದು, ಅಳಿಯ ರವಿ, ಸಹೋದರ-ಸಹೋದ ರಿಯರಾದ ನಾರಾಯಣನ್, ಸುಂದರಿ, ಗಿರಿಜ, ಶಾರದ, ನಾರಾಯಣಿ, ಕಲ್ಯಾಣಿ, ಚಂದ್ರಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಸುಕು ಮಾರನ್ ಈ ಹಿಂದೆ ನಿಧನರಾಗಿದ್ದಾರೆ.