ವ್ಯಕ್ತಿ ಮನೆಯೊಳಗೆ ನೇಣು ಬಿಗಿದು ಸಾವು
ಹೊಸದುರ್ಗ: ವ್ಯಕ್ತಿಯೋರ್ವ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ. ನೀಲೇಶ್ವರ ನೆಡುಕಂಡ ಎಂಬಲ್ಲಿನ ರಾಜೀವನ್ (52) ಮೃತ ವ್ಯಕ್ತಿ. ಮೊನ್ನೆ ಇವರು ಮನೆಯ ಬೆಡ್‌ರೂಂನಲ್ಲಿ ಸೀರೆ ಬಳಸಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ. ಟಿ. ಚೊಯ್ಯಂಬು-ಜಾನಕಿ ದಂಪತಿಯ ಪುತ್ರನಾದ ಮೃತರು ಪತ್ನಿ ಲೀಲಾ, ಮಕ್ಕಳಾದ ಅಖಿಲ, ಆದರ್ಶ್, ಅಳಿಯ ವಿನೀಶ್, ಸಹೋದರರಾದ ರಾಜು, ರಮೇಶನ್, ಸಹೋದರಿ ತಂಗಮಣಿ ಮೊದಲಾ ದವರನ್ನು ಅಗಲಿದ್ದಾರೆ.