ಮಂಜೇಶ್ವರ: ಕಾಸರಗೋಡು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ನರಹತ್ಯಾ ಪ್ರಕರಣ ಹಾಗೂ ಕರ್ನಾಟಕದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಶ್ರೀಗಂಧ ಸಾಗಾಟ ಪ್ರಕರಣದಲ್ಲಿ ಆರೋಪಿಯಾದ ವರ್ಕಾಡಿ ನಿವಾಸಿ ೨೭ ವರ್ಷಗಳ ಬಳಿಕ ಸೆರೆಗೀಡಾಗಿದ್ದಾನೆ. ವರ್ಕಾಡಿ ಕುಂಡಾಪು ವಿನ ಎಸ್.ಎ. ಅಶ್ರಫ್ ಎಂಬಾತನನ್ನು ಮಂಜೇಶ್ವರ ಪೊಲೀಸರ ಸಹಾಯದೊಂದಿಗೆ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.೨೭ ವರ್ಷಗಳ ಹಿಂದೆ ಅಶ್ರಫ್‌ನನ್ನು ಬೆಳ್ತಂಗಡಿ ಪೊಲೀಸರು ಶ್ರೀಗಂಧ ಪ್ರಕರಣಕ್ಕೆ ಸಂಬಂಧಿಸಿ ಸೆರೆಹಿಡಿದಿದ್ದರು. ಅನಂತರ ಜಾಮೀನಿನಲ್ಲಿ ಬಿಡುಗಡೆ ಗೊಂಡ ಈತ ಮುಂಬಯಿ, ಗಲ್ಫ್ ಎಂಬಿ ಡೆಗಳಲ್ಲಿ ತಲೆಮರೆಸಿಕೊಂಡಿದ್ದನು. ಇತ್ತೀಚೆಗೆ ಈತ ಊರಿಗೆ ಬಂದಿರುವು ದಾಗಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು.
