ಶಬರಿಮಲೆಗೆ ಕರ್ತವ್ಯಕ್ಕೆ ತೆರಳಿದ ಪೊಲೀಸ್ ಆಫೀಸರ್ ಕುಸಿದು ಬಿದ್ದು ಮೃತ್ಯು
ಪತ್ತನಂತಿಟ್ಟ: ಶಬರಿಮಲೆಗೆ ಕರ್ತವ್ಯಕ್ಕೆ ತಲುಪಿದ ಪೊಲೀಸ್ ಕುಸಿದು ಬಿದ್ದು ಮೃತಪಟ್ಟರು. ಪತ್ತನಂತಿಟ್ಟ ತನ್ನಿತ್ತೋಡ್ ಠಾಣೆಯ ಸಿಪಿಒ, ತಿರುವನಂತಪುರ ವೆಳ್ಳನಾಡ್ ಪುದುಮಂಗಲ ಎ.ಜೆ. ನಿವಾಸದ ಅಮಲ್ ಜೋಸ್ (28) ಮೃತಪಟ್ಟವರು. ಅಪ್ಪಾಚ್‌ಮೇಡ್ ನಲ್ಲಿ ಎದೆನೋವು ಕಂಡು ಬಂದಿತ್ತು. ಕೂಡಲೇ ಪಂಪಾದಲ್ಲಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಹೃದಯಾಘಾತ ಮರಣಕ್ಕೆ ಕಾರಣವೆಂದು ಪತ್ತೆಹಚ್ಚಲಾಗಿದೆ.