ಶಬರಿಮಲೆಗೆ ತೆರಳುತ್ತಿದ್ದ ಕಾರಿಗೆ ಬೆಂಕಿ: ಪ್ರಯಾಣಿಕರು ಪಾರು

ಪತ್ತನಂತಿಟ್ಟ: ಶಬರಿಮಲೆಗೆ ತೆರಳುತ್ತಿದ್ದವರು ಸಂಚರಿಸುತ್ತಿದ್ದ ಕಾರಿಗೆ ಬೆಂಕಿ ತಗಲಿದೆ. ಕಾರಿನಲ್ಲಿದ್ದ ಆರು ಮಂದಿ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಪಾಲಕ್ಕಾಡ್ ನಿವಾಸಿಗಳು ಸಂಚರಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗಲಿದೆ. ಪಂಪಾಕ್ಕಿರುವ ಪ್ರಯಾಣ ಮಧ್ಯೆ ಈ ದುರಂತ ಸಂಭವಿಸಿದೆ.  ಬೆಂಕಿ ತಗಲಿರುವುದು ತಿಳಿದ ಪ್ರಯಾಣಿಕರು ಕಾರನ್ನು ನಿಲ್ಲಿಸಿ ಇಳಿದು ಓಡಿದರು. ಕೂಡಲೇ ಮಾಹಿತಿ ತಿಳಿದು ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದೆ. ಇಂದು ಬೆಳಿಗ್ಗೆ ಶಬರಿಮಲೆಯಲ್ಲಿ ನಡೆದ ಹುತ್ತರಿ ಆಚರಣೆಯಲ್ಲಿ ಭಾಗವಹಿಸರು ಕಾರಿನಲ್ಲಿದ್ದವರು ತೆರಳುತ್ತಿದ್ದರು.

You cannot copy contents of this page