ಶಬರಿಮಲೆಯಲ್ಲಿ 20 ಲಕ್ಷ ಮಂದಿಗೆ ಅನ್ನದಾನ
ಶಬರಿಮಲೆ: ಶಬ ರಿಮಲೆ ಕ್ಷೇತ್ರಕ್ಕೆ ತೀರ್ಥಾಟನಾ ಋತುವಿನಲ್ಲಿ ಆಗಮಿಸುವ 20 ಲಕ್ಷ ಮಂದಿಗೆ ಅನ್ನದಾನ ವಿತರಿಸುವ ಕ್ರಮ ಕೈಗೊಳ್ಳಲಾಗುತ್ತಿದೆಯೆಂದು ಮುಜರಾಯಿ ಮಂಡಳಿ ತಿಳಿಸಿದೆ.
ಕಳೆದ ಋತುವಿನಲ್ಲಿ 15 ಲಕ್ಷ ಮಂದಿಗೆ ಅನ್ನದಾನ ನೀಡಲಾಗಿತ್ತು. ಇದರ ಹೊರತಾಗಿ ತೀರ್ಥಾಟಕರಿಗೆ ವಾಸ ಸೌಕರ್ಯ ಮತ್ತು ಅರೋಗ್ಯ ಸೇವೆಗೂ ಅಗತ್ಯದ ಸೌಕರ್ಯ ಏರ್ಪಡಿಸಲಾಗಿದೆ.
1994ರಲ್ಲಿ ಸನ್ನಿಧಾನದಲ್ಲಿ ನಿರ್ಮಿಸಲಾದ ಶಬರಿ ಗೆಸ್ಟ್ ಹೌಸ್‌ನ್ನು ಈಗ ನವೀಕರಿಸಲಾ ಗುತ್ತಿದೆ. ಈ ಅತಿಥಿಗೃಹದಲ್ಲಿ ಜ್ಯಾರಿಯಲ್ಲಿ ೫೪ ಕೊಠಡಿಗಳಿವೆ. ಮುಜರಾಯಿ ಮಂಡಳಿಯ ಸಿಬ್ಬಂದಿಗಳಿಗೆ ವಾಸಿಸುವ ಸ್ಟಾಫ್ ಕ್ವಾರ್ಟರ್ಸ್‌ನ್ನು ನವೀಕರಿಸಲಾಗಿದೆ. ಪಂಪಾದಲ್ಲಿರುವ ಅತಿಥಿಗೃಹವನ್ನು ಈಗ ನವೀಕರಿಸಲಾಗುತ್ತಿದೆ. ಪಂಪಾ ಮತ್ತು ಅಪ್ಪಾಚಿಮೇಡಿನಲ್ಲಿ ತೀರ್ಥಾಟಕರಿಗೆ ಉತ್ತಮ ರೀತಿಯ ಆರೋಗ್ಯ ಸೇವೆ ನೀಡಲಾಗುತ್ತಿದೆ. ಇದರ ಹೊರತಾಗಿ ವಿಶ್ವವಿಖ್ಯಾತ ನ್ಯೂಜನರೇಶನ್ ರಾಮ್ ನಾರಾಯಣನ್‌ರ ನೇತೃತ್ವದಲ್ಲಿ ತಜ್ಞರಿಂದ ನೂರಕ್ಕೂ ಹೆಚ್ಚು ವೈದ್ಯರುಗಳು ‘ಡಿವೋಟೀಸ್ ಆಫ್ ಡಾಕ್ಟರ್ಸ್’ ಎಂಬ ಹೆಸರಲ್ಲಿ ಸೇವೆ ನಡೆಸುವ ಆಸಕ್ತಿ ವಹಿಸಿ ಮುಂದೆ ಬಂದಿದ್ದಾರೆಂದು ಮಂಡಳಿ ತಿಳಿಸಿದೆ. ಮಂಡಲ ಮತ್ತು ಮಕರಜ್ಯೋತಿ ತೀರ್ಥಾಟನಾ ಋತುವಿನಲ್ಲಿ ಎಕೋ ಕಾರ್ಡಿಯೋಗ್ರಾಂ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ತಜ್ಞ ವೈದ್ಯರುಗಳ ಸೇವೆ ಲಭಿಸುವ ಶಿಬಿರಗಳನ್ನು ಸನ್ನಿಧಾನ ಮತ್ತು ಪಂಪಾದಲ್ಲಿ ಏರ್ಪಡಿಸಲಾಗಿದೆಯೆಂದು ಮಂಡಳಿ ತಿಳಿಸಿದೆ.