ಪತ್ತನಂತಿಟ್ಟ: ಪಂದಳಂ ರಾಜಕುಟುಂಬ ಸದಸ್ಯ ಕೈಪುಳ ಅಂಬಿಕಾ ವಿಲಾಸ ಅರಮನೆಯಲ್ಲಿ ಮೂಲ ನಕ್ಷತ್ರ ಶಶಿಕುಮಾರ್ ವರ್ಮ (೭೨) ನಿಧನ ಹೊಂದಿದರು. ನಿನ್ನೆ ಸಂಜೆ ೫.೩೦ಕ್ಕೆ ನಿಧನ ಸಂಭವಿಸಿದೆ. ಮೃತದೇಹದ ಅಂತ್ಯ ಸಂಸ್ಕಾರ ಇಂದು ಸಂಜೆ ನಡೆಯಲಿದೆ. ಕಳೆದ ಕೆಲವು ದಿನಗಳಿಂದ ರೋಗ ತಗಲಿ ಚಿಕಿತ್ಸೆಯಲ್ಲಿದ್ದರು.
ಮೃತರು ಪತ್ನಿ ಮೀರಾ ವರ್ಮ, ಮಕ್ಕಳಾದ ಸಂಗೀತವರ್ಮ, ಅರವಿಂದ್ ವರ್ಮ, ಮಹೇಂದ್ರ ವರ್ಮ, ಅಳಿಯ ನರೇಂದ್ರ ವರ್ಮ ಹಾಗೂ ಅಪಾರ ಬಂಧು-ಮಿತ್ರ ರನ್ನು ಅಗಲಿದ್ದಾರೆ. ಸೆಕ್ರೆಟರಿಯೇಟ್ ನಲ್ಲಿ ಔದ್ಯೋಗಿಕ ಬದುಕು ಆರಂಭಿಸಿದ ಇವರು ೨೦೦೭ರಲ್ಲಿ ಡೆಪ್ಯುಟಿ ಸೆಕ್ರೆಟರಿಯಾಗಿ ನಿವೃತ್ತರಾ ದರು. ಮಾಜಿ ಸಚಿವ ಪಾಲೊಳಿ ಮುಹಮ್ಮದ್ ಕುಟ್ಟಿಯವರ ಪ್ರೈವೇ ಟ್ ಸೆಕ್ರೆಟರಿಯಾಗಿದ್ದರು. ಪಂದಳಂ ಅರಮನೆಯ ಕಾರ್ಯನಿರ್ವಾಹಕ ಸಂಘದ ಅಧ್ಯಕ್ಷರಾಗಿದ್ದರು. ವಿವಿಧ ಧಾರ್ಮಿಕ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿದ್ದ ಇವರು ಕೇರಳ ಕ್ಷೇತ್ರ ಆಚಾರ ಸಮಿತಿ, ತಿರುವಾಭರಣ ಹಾದಿ ಸಂರಕ್ಷಣೆ ಸಮಿತಿ ಎಂಬಿವುಗಳಲ್ಲಿ ಅಧ್ಯಕ್ಷರಾಗಿದ್ದರು.