ಶಬರಿಮಲೆ ತೀರ್ಥಾಟನೆ ಹೃದಯಾಘಾತದಿಂದ ಸಾವಿಗೀಡಾದವರ ಸಂಖ್ಯೆ 36ಕ್ಕೆ

ಶಬರಿಮಲೆ: ಈ ವರ್ಷ ಶಬರಿಮಲೆ ತೀರ್ಥಾಟನೆಗೆ ತಲುಪಿದವರ ಪೈಕಿ ಹೃದಯಾ ಘಾತದಿಂದ ಸಾವಿಗೀಡಾದವರ ಸಂಖ್ಯೆ 36ಕ್ಕೇರಿದೆ. ಇದು ಈ ಬಾರಿಯ ಮಂಡಲಕಾಲದಿಂದ ನಿನ್ನೆವರೆಗೆ ಪಂಬಾ, ನಿಲಯ್ಕಲ್ ಹಾಗೂ ಸನ್ನಿಧಾನದಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟವರ ಸಂಖ್ಯೆಯಾಗಿದೆ.

ನಿರಂತರ ಸೇವಿಸುತ್ತಿದ್ದ ಔಷಧಿ ಸರಿಯಾಗಿ ಸೇವಿಸದಿರುವುದರಿಂದ ಹೆಚ್ಚಿನವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನೂ ಹಲವರನ್ನು ಚಿಕಿತ್ಸೆ ನೀಡಿ ಅಪಾಯದಿಂದ ರಕ್ಷಿಸಲಾಗಿದೆ.

You cannot copy contents of this page