ಶಬರಿಮಲೆ ಯಾತ್ರೆ ಮಧ್ಯೆ ಸಹ ಯಾತ್ರಿಕನ ಇರುಮುಡಿಕಟ್ಟಿನಲ್ಲಿ ಖೋಟಾನೋಟು ತುರುಕಿಸಿದ ಘಟನೆ: ಆರೋಪಿ ಸೆರೆ
ಕಾಸರಗೋಡು: ಶಬರಿಮಲೆಗೆ ತೆರಳಿದ ಅಯ್ಯಪ್ಪ ಸಂಘದ ಸಹಯಾತ್ರಿಕನ ಇರುಮುಡಿ ಕಟ್ಟಿನಲ್ಲಿ ಖೋಟಾನೋಟು ತುರುಕಿಸಿದ ಘಟನೆಯಲ್ಲಿ ಆರೋಪಿ ಸೆರೆಯಾಗಿ ದ್ದಾನೆ. ಕಳನಾಡು ಬಾಲಗೋಪಾಲ ಕ್ಷೇತ್ರದ ಸಮೀಪ ಬಾಡಿಗೆಗೆ ವಾಸ ಮಾಡುವ ಕಿಶೋರ್ ಕುಮಾರ್ (35) ಸೆರೆಯಾದ ಯುವಕ. ಈತ ನನ್ನು ಹೊಸದುರ್ಗ ಜ್ಯುಡೀಶಿಯಲ್ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸ ಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜನವರಿ ೬ರಂದು ಪಾಲಕುನ್ನ್‌ನ ಮೊಬೈಲ್ ಅಂಗಡಿಯಲ್ಲಿ ಫೋನ್‌ನ ಡಿಸ್‌ಪ್ಲೆ ಬದಲಿಸಲು ಕಿಶೋರ್‌ನ ಗೆಳೆಯ ವಿನೋದ್ 500 ರೂ.ಗಳ 4 ನೋಟುಗಳನ್ನು ನೀಡಿದ್ದನು. ಇದು ಖೋಟಾನೋಟು ಎಂದು ಪತ್ತೆಹಚ್ಚಿದ ಅಂಗಡಿ ಮಾಲಕ ವಿನೋದ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪ್ರಾಥಮಿಕ ತನಿಖೆಯಲ್ಲಿ ವಿನೋದ್‌ಗೆ ಖೋಟಾನೋಟು ತಂಡದೊಂದಿಗೆ ಸಂಪರ್ಕವಿಲ್ಲವೆಂದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ನಡೆಸಲು ಪ್ರತ್ಯೇಕ ತನಿಖಾ ತಂಡವನ್ನು ನೇಮಕ ಮಾಡಲಾಗಿತ್ತು. ವಿನೋದ್ ಹಾಗೂ ಕಿಶೋರ್ ಕುಮಾರ್ ಸೇರಿದ ತಂಡ ಶಬರಿಮಲೆಗೆ ತೆರಳಿ ಹಿಂತಿರುಗಿ ಬಂದ ಬಳಿಕ ಮೊಬೈಲ್ ಅಂಗಡಿಯಲ್ಲಿ ಈ ನೋಟು ನೀಡಿದ್ದರು. ಇದನ್ನು ತಿಳಿದುಕೊಂಡ ಪೊಲೀಸರ ತಂಡ ವಿನೋದ್‌ನ ಜೊತೆಗೆ ಶಬರಿಮಲೆಗೆ ತೆರಳಿದವರ ಬಗ್ಗೆ ತನಿಖೆ ಆರಂಭಿಸಿದರು. ಈ ಮಧ್ಯೆ ಕಿಶೋರ್ ಕುಮಾರ್‌ನ ಬಗ್ಗೆ ಪೊಲೀಸರಿಗೆ ರಹಸ್ಯ ಮಾಹಿತಿ ಲಭಿಸಿದೆ. ನಾಲ್ಕು ತಿಂಗಳ ಹಿಂದೆ ಮಂಗಳೂರು ಸಿಟಿ ಕ್ರೈಮ್ ಬ್ರಾಂಚ್ ಚೆರ್ಕಳದಿಂದ 500 ರೂ.ಗಳ 400ಕ್ಕೂ ಹೆಚ್ಚು ಖೋಟಾನೋಟುಗಳನ್ನು ಹಾಗೂ ಮುದ್ರಣ ಯಂತ್ರವನ್ನು ವಶಪಡಿಸಿದ ಪ್ರಕರಣದಲ್ಲಿ ಕಿಶೋರ್ ಕುಮಾರ್ ಈ ಮೊದಲೇ ಸೆರೆಯಾಗಿದ್ದನು. ಶಬರಿಮಲೆಯ ದರ್ಶನದ ಮಧ್ಯೆ ಪಂಪಾದಲ್ಲಿ ಇವರು ವಾಸಿಸಿದ್ದ ಸ್ಥಳಗಳನ್ನು ಪೊಲೀಸರು ಪರಿಶೀಲಿಸಿ ದರು. ಆ ಬಳಿಕ ನಡೆಸಿದ ವಿಚಾರಣೆ ಯಲ್ಲಿ ಕಿಶೋರ್ ಕುಮಾರ್ ವಿನೋದ್‌ನ ಇರುಮುಡಿ ಕಟ್ಟಿನಲ್ಲಿ ಖೋಟಾನೋಟನ್ನು ತುರುಕಿಸಿರುವು ದಾಗಿ ಒಪ್ಪಿಕೊಂಡಿದ್ದಾನೆ. ವಿನೋದ್ ನ ಇರುಮುಡಿ ಕಟ್ಟಿನಲ್ಲಿದ್ದ 10,000 ರೂ.ಗಳ ಕಂತೆಯಲ್ಲಿ ಏಳು 500 ರೂಪಾಯಿಯ ಖೋಟಾನೋಟು ತುರುಕಿಸಿ ಅದರಿಂದ ಅಸಲಿ ನೋಟನ್ನು ತೆಗೆದಿರುವುದಾಗಿ ಪೊಲೀಸರಲ್ಲಿ ತಿಳಿಸಿದ್ದಾನೆ.
ಕಿಶೋರ್‌ನ ಮನೆಯಲ್ಲೂ, ವಿನೋದ್‌ನ ಮನೆಯಲ್ಲೂ ಪೊಲೀ ಸರು ತಪಾಸಣೆ ನಡೆಸಿದರು. ಕಿಶೋರ್ ಕುಮಾರ್‌ನ ಮನೆಯ ಪಾಯಿಖಾ ನೆಯ ಟ್ಯಾಂಕ್ ತೆರೆದು ಪರಿಶೀಲಿಸಿದಾಗ ಅದರೊಳಗೆ ಜೀರ್ಣಗೊಳ್ಳಲು ಆರಂಭಿಸಿದ ಪ್ರಿಂಟಿಂಗ್ ಮೆಶಿನ್‌ನ ಬಿಡಿ ಭಾಗಗಳು ಪತ್ತೆಯಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾರ ನೇತೃತ್ವದಲ್ಲಿರುವ ಎಸ್‌ಎಜಿಒಸಿ ತಂಡ ಈ ಕೇಸನ್ನು ತನಿಖೆ ನಡೆಸುತ್ತಿದೆ. ಎಸ್‌ಐ ನಾರಾಯಣನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಪಿ. ಪ್ರಮೋದ್ ಎಂಬಿವರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.