ಶಬರಿಮಲೆ ಸ್ಪೋಟ್ ಬುಕ್ಕಿಂಗ್: ಪ್ರತ್ಯಕ್ಷ ಹೋರಾಟಕ್ಕೆ ಚಾಲನೆ

ಪತ್ತನಂತಿಟ್ಟ: ಶಬರಿಮಲೆಯಲ್ಲಿ ಭಕ್ತರ ದರ್ಶನಕ್ಕಾಗಿರುವ ಸ್ಪೋಟ್ ಬುಕ್ಕಿಂಗ್ ಸೌಕರ್ಯವನ್ನು ರದ್ದುಪಡಿಸಿದ ತೀರ್ಮಾನ ವಿರುದ್ಧ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಪ್ರತ್ಯಕ್ಷ ಹೋರಾಟ ಆರಂಭಿಸಿದೆ. ಇದರಂತೆ ಸರಕಾರದ ತೀರ್ಮಾನವನ್ನು ಪ್ರತಿಭಟಿಸಿ ಅಯಯಪ್ಪ ಸೇವಾ ಸಮಾಜದ ನೇತೃತ್ವದಲ್ಲಿ ನಿನ್ನೆ ಧರಣಿ ಮುಷ್ಕರ ಮಾಡಲಾಯಿತು. ಅಯ್ಯಪ್ಪ ಸೇವಾಸಮಾಜದ ರಾಜ್ಯ ಅಧ್ಯಕ್ಷ ಅಕ್ಕಿರಮಣನ್ ಕಾಳಿದಾಸನ್ ಭಟ್ಟತ್ತಿರಿಪ್ಪಾಡ್ ಉದ್ಘಾಟಿಸಿದರು. ಸ್ಪೋಟ್ ಬುಕ್ಕಿಂಗ್ ಸೌಕರ್ಯವನ್ನು ಮರು ಸ್ಥಾಪಿಸಬೇಕು, ಇಲ್ಲವಾದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದೆಂದು ಅವರು ಮುನ್ನೆಚ್ಚರಿಕೆ ನೀಡಿದರು. 2018ರ ಮೊದಲು ಒಂದು ಕೋಟಿಗಿಂತಲೂ ಹೆಚ್ಚು ಭಕ್ತರು ಯಾವುದೇ ಸಮಸ್ಯೆಗಳಿಲ್ಲದೆ ಶಬರಿಮಲೆ ಕ್ಷೇತ್ರದರ್ಶನ ನಡೆಸುತ್ತಿದ್ದರು. ಆಗ ಯಾವುದೇ ಸಮಸ್ಯೆಗಳು ಉಂಟಾಗಿರಲಿಲ್ಲ. ಈಗ ಸರಕಾರ ಈ ವಿಷಯದಲ್ಲಿ ಅನಗತ್ಯ ಸಮಸ್ಯೆ ಸೃಷ್ಟಿಗೆ ದಾರಿ ಮಾಡಿಕೊಡುತ್ತಿದೆ ಎಂದು ಅವರು ಹೇಳಿದರು. ಜಿಲ್ಲಾಧ್ಯಕ್ಷ ಪಿ.ಡಿ. ಪದ್ಮನಾಭನ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಹಲವರು ನೇತೃತ್ವ ನೀಡಿ ಮಾತನಾಡಿದರು.

RELATED NEWS

You cannot copy contents of this page