ಶಾಂತಿಗುರಿ ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಬ್ರಹ್ಮಕಲಶಾಭಿಷೇಕ ಸಮಾಪ್ತಿ: ಯತಿವರ್ಯರಿಂದ ಆಶೀರ್ವಚನ

ಬೇಕೂರು: ಶಾಂತಿಗುರಿ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಶ್ರೀ ಮೂಕಾಂಬಿಕಾ ದೇವಿಯ ಪೀಠ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಮತ್ತು ಸಪರಿವಾರ ದೈವಗಳ ಪ್ರತಿಷ್ಟ್ಠೆ ಕಲಶಾಭಿಷೇಕ ಕಾರ್ಯಕ್ರಮ ನಿನ್ನೆ ಸಮಾಪ್ತಿಗೊಂಡಿತು. ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀ ಯೋಗಿಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಉದ್ಯಮಿಗಳಾದ ದಯಾಸಾಗರ್ ಚೌಟ, ಮೋಹನ್ ಶೆಟ್ಟಿ ಮಜ್ವಾರ್, ಬೆಂಗಳೂರು ಉದ್ಯಮಿ ಸೌಂದರ್ಯ ರಮೇಶ್, ಬೆಂಗಳೂರು ಬಂಟರ ಸಂಘದ ಅಧ್ಯಕ್ಷೆ ಕಾಂತಿ ಶೆಟ್ಟಿ ಬೆಂಗಳೂರು, ಉದ್ಯಮಿ ಪ್ರಭಾಕರ ಸೇನವ ಬೆಂಗಳೂರು, ಡಾ| ಶ್ರೀಧರ ಭಟ್ ಉಪ್ಪಳ, ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ, ಕ್ಯಾಂಪ್ಕೋ ನಿರ್ಧೇಶಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಪಂಚಾಯತ್ ಸದಸ್ಯೆ ಸುಧಾಗಣೇಶ್, ಐಲ ಕ್ಷೇತ್ರದ ಮೊಕ್ತೇಸರ ಶಿವರಾಮ ಪಕಳ, ಕಾರ್ತಿಕ್ ಶೆಟ್ಟಿ ಮಜಿಬೈಲ್, ಪುತ್ತೂರು ಬಿಜೆಪಿ ಮುಖಂಡ ಹರಿಪ್ರಸಾದ್ ಯಾದವ್, ಮುಂಬಯಿ ಉದ್ಯಮಿ ಸೀತಾರಾಮ ಶೆಟ್ಟಿ, ತಿಂಬರ ಮೊದಲಾದವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗಣ್ಯರಾದ ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಸೌಂದರ್ಯ ರಮೇಶ್, ಕಾಂತಿ ಶೆಟ್ಟಿ, ಸಮಿತಿಯ ಕಾರ್ಯಕರ್ತರಾದ ದುಗ್ಗಪ್ಪ ಶೆಡ್ತಿ ತಿಂಬರ, ಗಣೇಶ್ ಪುಳಿಕುತ್ತಿ, ಚಂದ್ರಹಾಸ ಪೂಜಾರಿ ಪ್ರತಾಪನಗರ, ಜಗದೀಶ ಬಾಯಿಕಟ್ಟೆ ಇವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾ ಯಿತು. ಗೀತಾಂಜಲಿ ರೈ ಪ್ರಾರ್ಥನೆ ಹಾಡಿದರು. ಸಮಿತಿಯ ಕಾರ್ಯಾಧ್ಯಕ್ಷೆ ಮೀರಾ ಆಳ್ವ ಪ್ರಾಸ್ತಾವಿಕ ಹಾಗೂ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ ವಂದಿಸಿದರು. ದಿವಾಕರ ಪ್ರತಾಪನಗರ ನಿರೂಪಿಸಿದರು.

You cannot copy contents of this page