ಶಾಲಾ ಕಟ್ಟಡಗಳ ಫಿಟ್‌ನೆಸ್ ಪರಿಶೀಲನೆಗೆ ವಿಶೇಷ ಸಮಿತಿ

ತಿರುವನಂತಪುರ: ರಾಜ್ಯದ ಶಾಲೆಗಳ ಫಿಟ್‌ನೆಸ್ (ದೃಢತೆ)ಗಳ ಬಗ್ಗೆ ಪರಿಶೀಲಿಸಲು ವಿಶೇಷ ಸಮಿತಿಗೆ ರೂಪು ನೀಡಲು ರಾಜ್ಯ ಸ್ಥಳೀಯಾಡಳಿತ ಇಲಾಖೆ ತೀರ್ಮಾನಿಸಿದೆ. ಶಾಲಾ ಕಟ್ಟಡಗಳ ಫಿಟ್‌ನೆಸ್‌ಗಳನ್ನು ನಿರ್ಣಯಿಸುವ ಹೊಸ ನಿರ್ದೇಶಗಳನ್ನು ಈ ಸಮಿತಿ ಸರಕಾರಕ್ಕೆ ಸಲ್ಲಿಸಲಿದೆ.

ಈ ಕುರಿತಾದ ಶಿಫಾರಸ್ಸುಗಳನ್ನು ತಯಾರಿಸುವ ಹೊಣೆಗಾರಿಕೆಯನ್ನು ಸ್ಥಳೀಯಾಡಳಿತ ಇಲಾಖೆಯ ಚೀಫ್ ಇಂಜಿನಿಯರ್ ಕೆ.ಜಿ. ಸಂದೀಪ್‌ರಿಗೆ ವಹಿಸಿಕೊಡಲಾಗಿದೆ. ಇಲೆಕ್ಟ್ರಿಕಲ್ ಚೀಫ್ ಇನ್ಸ್‌ಪೆಕ್ಟರ್ ಶಾಲಾ ಮುಖ್ಯೋಪಾಧ್ಯಾಯ, ಅನುದಾನಿತ ಶಾಲೆಗಳ ಆಡಳಿತ ಸಮಿತಿ, ರಾಜ್ಯ ವಿದ್ಯುನ್ಮಂಡಳಿ ಮತ್ತು ಅಗ್ನಿಶಾಮಕ ದಳದ ಪ್ರತಿನಿಧಿಗಳನ್ನು ಈ ಸಮಿತಿಯಲ್ಲಿ ಒಳಪಡಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಈ ಸಮಿತಿ ಎಲ್ಲಾ ಶಾಲಾ ಕಟ್ಟಡಗಳ ದೃಢತೆಗಳ ಬಗ್ಗೆ ಮೊದಲು ಪರಿಶೀಲಿಸಲಿದೆ. ಬೆಂಕಿ ಅನಾಹುತ ಸಾಧ್ಯತೆ ಬಗ್ಗೆ ಇಲೆಕ್ಟ್ರಿಕಲ್ ವಯರಿಂಗ್ ಮತ್ತು ಅಗ್ನಿಶಾಮಕ ದಳದ ಪ್ರತಿನಿಧಿಗಳು ಪರಿಶೀಲಿಸು ವರು. ಪರಿಶೀಲನಾ ವರದಿ ಲಭಿಸಿದ ಬಳಿಕ ಅದಕ್ಕೆ ಹೊಂದಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು.

You cannot copy contents of this page