ಶಾಲಾ ಕಲೋತ್ಸವಕ್ಕೆ ಸಸ್ಯಾಹಾರ ಮಾತ್ರ
ಕೊಲ್ಲಂ: ಈ ಸಲದ ರಾಜ್ಯ ಶಾಲಾ ಕಲೋತ್ಸವದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಸಸ್ಯಾಹಾರ ಆಹಾರವನ್ನು ಮಾತ್ರವೇ ಬಡಿಸಲಾಗುವುದೆಂದೂ, ಮಾಂಸಾಹಾರ ನೀಡಲಾಗುವುದಿಲ್ಲವೆಂದು ರಾಜ್ಯ ಶಿಕ್ಷಣ ಖಾತೆ ಸಚಿವ ವಿ. ಶಿವನ್ ಕುಟ್ಟಿ ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷದ ರಾಜ್ಯ ಶಾಲಾ ಕಲೋತ್ಸವದಲ್ಲಿ ಮಾಂಸಾಹಾರ ಬಡಿಸಿರುವುದು ಭಾರೀ ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು. ಅದರಿಂದ ಈ ಬಾರಿ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.