ಶಾಲಾ ಕೆಲಸದ ದಿನ ಹೆಚ್ಚಿಸುವಂತೆ ಖಾದರ್ ಕಮಿಟಿ ಶಿಫಾರಸ್ಸು
ತಿರುವನಂತಪುರ: ರಾಜ್ಯದಲ್ಲಿ ಸಾರ್ವಜನಿಕ ವಿದ್ಯಾಲಯಗಳ ಕೆಲಸದ ದಿನಗಳನ್ನು ಹೆಚ್ಚಿಸಬೇಕೆಂದು ಶಾಲಾ ಶಿಕ್ಷಣ ಪರಿಷ್ಕರಣೆ ಕುರಿತಾಗಿ ಅಧ್ಯಯನ ನಡೆಸಿದ ಡಾ. ಎಂ.ಎ ಖಾದರ್ ಕಮಿಟಿ ಶಿಫಾರಸು ಮಾಡಿದೆ. ಪಠ್ಯ ಪದ್ಧತಿಗೆ ಅನುಸಾರವಾಗಿ ಕೆಲಸದ ದಿನಗಳಿಲ್ಲದಿರು ವುದು ಶಿಕ್ಷಣದ ಭಾರ ಹೆಚ್ಚಿಸಲಿದೆ. ಇದು ಶಿಕ್ಷಣದ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಹೈಯರ್ ಸೆಕೆಂಡರಿ ಸಹಿತ ಕೆಲಸದ ದಿನಗಳನ್ನು ಹೆಚ್ಚಿಸಬೇಕೆಂದು ಎರಡು ವರ್ಷಗಳ ಹಿಂದೆ ಕಮಿಟಿ ಸರಕಾರಕ್ಕೆ ಸಲ್ಲಿಸಿದ್ದು ವರದಿಯಲ್ಲಿ ತಿಳಿಸಲಾಗಿದೆ.