ಶಾಲಾ ವಿದ್ಯಾರ್ಥಿನಿ ಅಸೌಖ್ಯ ಬಾಧಿಸಿ ಮೃತ್ಯು

ಬದಿಯಡ್ಕ: ಅಸೌಖ್ಯ ಬಾಧಿಸಿ ಶಾಲಾ ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಡೆದಿದೆ. ಅಗಲ್ಪಾಡಿ  ಶ್ರೀ ಅನ್ನಪೂ ರ್ಣೇಶ್ವರಿ ಶಾಲೆಯ ೬ನೇ ತರಗತಿ ವಿದ್ಯಾ ರ್ಥಿನಿಯಾದ ಅರ್ಪಿತ (೧೧) ಮೃತಪಟ್ಟ ಮಗು.  ಮಾರ್ಪನಡ್ಕ ಕಾಲನಿಯ ಜನಾ ರ್ದನ-ಉಷಾ ದಂಪತಿಯ ಪುತ್ರಿಯಾ ದ ಈ ಮಗುವಿಗೆ ಬೆಳವಣಿಗೆ ಕಡಿಮೆ ಯಿದ್ದು, ಅಸೌಖ್ಯ ಬಾಧಿಸಿತ್ತು. ಒಂದು ವಾರ ಹಿಂದೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಲಾಗಿತ್ತು.  ಅಲ್ಲಿಂದ ನಿನ್ನೆ ಬಿಡುಗಡೆಗೊಳಿಸಿ ಕರೆದುಕೊಂಡು ಬರುತ್ತಿದ್ದಂತೆ ಮತ್ತೆ ಅಸೌಖ್ಯ ಉಲ್ಭಣಿಸಿದೆ. ಇದರಿಂದ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತ ವಿದ್ಯಾರ್ಥಿನಿ ತಂದೆ, ತಾಯಿ, ಸಹೋದರಿ ಹರ್ಷಿತ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾಳೆ.

You cannot copy contents of this page