ಶಾಲಾ ವಿದ್ಯಾರ್ಥಿಯನ್ನು ಅಪಹರಿಸಿ ಕುತ್ತಿಗೆ ಕೊಯ್ದು ಕೊಲೆ : ಇಬ್ಬರ ಬಂಧನ
ಬೆಂಗಳೂರು: ಟ್ಯೂಶನ್ ಮುಗಿಸಿ ಮನೆಗೆ ಮರಳುತ್ತಿದ್ದ ಬಾಲಕನನ್ನು ಅಪಹರಿಸಿ ಕುತ್ತಿಗೆ ಕೊಯ್ದು ಕೊಲೆಗೈದು ಮೃತದೇಹಕ್ಕೆ ಪೆಟ್ರೋಲ್ ಸುರಿದು ಕಿಚ್ಚಿಟ್ಟ ದಾರುಣ ಘಟನೆ ಬೆಂಗಳೂರು ಬಳಿ ನಡೆದಿದೆ. ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅರಕೆರೆಯ ಶಾಂತಿ ನಿಕೇತನ ಬಡಾವಣೆಯಲ್ಲಿ ಟ್ಯೂಶನ್ ಮುಗಿಸಿ ಮನೆಗೆ ಮರಳುತ್ತಿದ್ದ ಸ್ಥಳೀಯ ನಿವಾಸಿಯಾದ ನಿಶ್ಚಿತ್ (13) ಎಂಬ ಬಾಲಕನನ್ನು ದುಷ್ಕರ್ಮಿಗಳು ಕೊಲೆಗೈದಿ ದ್ದಾರೆ. ಈ ಸಂಬಂಧ ಗೋಪಾಲಕೃಷ್ಣ ಹಾಗೂ ಗುರುಮೂರ್ತಿ ಎಂಬಿಬ್ಬರನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿ ದ್ದಾರೆ. ೮ನೇ ತರಗತಿ ವಿದ್ಯಾರ್ಥಿಯಾದ ನಿಶ್ಚಿತ್ ಬುಧವಾರ ರಾತ್ರಿ ಟ್ಯೂಶನ್ ಮುಗಿಸಿ ಮನೆಗೆ ಮರಳುತ್ತಿದ್ದನು. ಈ ವೇಳೆ ಕಾರಿನಲ್ಲಿ ತಲುಪಿದ ದುಷ್ಕರ್ಮಿ ಗಳು ಬಾಲಕನನ್ನು ಅಪಹರಿಸಿದ್ದರು. ಬಳಿಕ ಬಾಲಕನ ತಂದೆಗೆ ಕರೆ ಮಾಡಿದ ಆರೋಪಿಗಳು 5 ಲಕ್ಷ ರೂ.ಗಳ ಬೇಡಿಕೆ ಇರಿಸಿದ್ದರೆನ್ನಲಾಗಿದೆ. ಕಾಲೇ ಜೊಂ ದರಲ್ಲಿ ಸಹಾಯಕ ಪ್ರಾಧ್ಯಾ ಪಕರಾಗಿ ಕೆಲಸ ನಿರ್ವಹಿಸುತ್ತಿರುವ ಬಾಲಕನ ತಂದೆ ಈ ಬಗ್ಗೆ ಕೂಡಲೇ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪ್ರತ್ಯೇಕ ತಂಡ ರೂಪೀಕರಿಸಿ ಪೊಲೀಸರು ಶೋಧ ನಡೆಸುತ್ತ್ತಿದ್ದ ವೇಳೆ ಬಾಲಕನ ಮೃತದೇಹ ಕಗ್ಗಲಿಪುರ ರಸ್ತೆಯ ನಿರ್ಜನ ಪ್ರದೇಶದಲ್ಲಿ ನಿನ್ನೆ ಸಂಜೆ ಪತ್ತೆಯಾಗಿದೆ. ಬಾಲಕನ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದೆ. ಬಳಿಕ ಮೃತದೇಹದ ಮೇಲೆ ಪೆಟ್ರೋಲ್ ಸುರಿದು ಕಿಚ್ಚಿಟ್ಟು ಆರೋಪಿಗಳು ಪರಾರಿಯಾಗಿದ್ದರು.