ಶಾಲೆಗೆ ನುಗ್ಗಿ ಅಡುಗೆ ಮಾಡಿ ತಿಂದು ತೇಗಿ ಹಿಂತಿರುಗಿದ ಕಳ್ಳ

ಕಾಸರಗೋಡು: ಶಾಲೆಗೆ ಕಳವಿಗೆಂದು ನುಗ್ಗಿದ ಕಳ್ಳ ಅಲ್ಲಿ ಕದಿಯಲು  ಏನೂ ಸಿಗದಿದ್ದಾಗ ಅಲ್ಲೇ ಅಡುಗೆ ಮಾಡಿ ತಿಂದು ತೇಗಿ ಹಿಂತಿರುಗಿದ ಸ್ವಾರಸ್ಯಕರ ಘಟನೆ ನಡೆದಿದೆ.ತೃಕ್ಕರಿಪುರ ಕುಲೇರಿ ಜಿಎಲ್‌ಪಿ ಶಾಲೆಯಲ್ಲಿ ಈ ಘಟನೆ ನಡೆದಿದೆ.  ಶಾಲೆಗೆ ನುಗ್ಗಿದ ಕಳ್ಳರು ಅಲ್ಲಿ ಲ್ಯಾಪ್ ಟಾಪ್ ಇದ್ದರೂ ಅದನ್ನು ಅಲ್ಲೇ ಉಪೇಕ್ಷಿಸಿ  ಹಣಕ್ಕಾಗಿ ಹುಡುಕಾಟ ನಡೆಸಿದ್ದನ. ಆದರೆ ಅದು ಲಭಿಸಲಿಲ್ಲ. ಕೊನೆಗೆ ಆತ ಶಾಲಾ ಮಕ್ಕಳಿಗೆ  ಆಹಾರ ತಯಾರಿಸಲೆಂದು ತಂದಿರಿಸಲಾಗಿದ್ದ ಸಾಮಗ್ರಿಗಳನ್ನು ಉಪಯೋಗಿಸಿ ಅಲ್ಲೇ ಅಡುಗೆ ಮಾಡಿದ ಬಳಿಕ ಅದನ್ನು ತಿಂದು ತೇಗಿ ಹಿಂತಿರುಗಿದ್ದಾನ. ಕಳ್ಳ  ಅಡುಗೆ ಮಾಡುವ ದೃಶ್ಯ  ಶಾಲೆಯ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಅದರ ಜಾಡು ಹಿಡಿದು ಚಂದೇರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಶಾಲೆಗೆ ನುಗ್ಗುವ ಮೊದಲು ಕಳ್ಳ  ಅಲ್ಲೇ ಪಕ್ಕದ ಐಸ್‌ಕ್ರೀಂ ಅಂಗಡಿಯೊಂದಕ್ಕೆ ನುಗ್ಗಿ ಅಲ್ಲಿಂದ ಹಣ ಕಳವುಗೈದಿದ್ದನ.  ಅಲ್ಲಿನ ಸಿಸಿ ಟಿವಿಯಲ್ಲಿ ಆತನ ದೃಶ್ಯ ಪತ್ತೆಯಾಗಿದೆ. ಕಳವು ನಡೆದ ಎರಡೂ ಸ್ಥಳಗಳಿಗೆ ಪೊಲೀಸರು ಆಗಮಿಸಿ ಅಗತ್ಯದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

You cannot copy contents of this page