ಶಾಲೆಬಿಟ್ಟು ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ಬಿಗಿದಪ್ಪಿದ ಯುವಕ ಪೊಲೀಸ್ ಕಸ್ಟಡಿಗೆ
ಬದಿಯಡ್ಕ: ಶಾಲೆ ಬಿಟ್ಟು ಮನೆಗೆ ನಡೆದು ಹೋಗುತ್ತಿದ್ದ ೯ನೇ ತರಗತಿ ವಿದ್ಯಾರ್ಥಿನಿಯನ್ನು ಬಿಗಿದಪ್ಪಿದ ಯುವಕನ ವಿರುದ್ಧ ಬದಿಯಡ್ಕ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ. ನೀರ್ಚಾಲು ಪಾಡ್ಲಡ್ಕದ ಅನ್ವರ್ (33) ಎಂಬಾ ತನ ವಿರುದ್ಧ ಕೇಸು ದಾಖಲಿಸಲಾಗಿದೆ. ಈತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ನಿನ್ನೆ ಸಂಜೆ ೧೪ರ ಹರೆಯದ ಬಾಲಕಿ ಶಾಲೆಬಿಟ್ಟು ಮನೆಗೆ ನಡೆದು ಹೋಗುತ್ತಿದ್ದಳು. ಈ ವೇಳೆ ಕಾರಿನಲ್ಲಿ ತಲುಪಿದ ಅನ್ವರ್ ಬಾಲಕಿಯ ಸಮೀಪ ಕಾರು ನಿಲ್ಲಿಸಿ ದಾರಿ ಕೇಳಿದ್ದಾನೆ. ಅಲ್ಲದೆ ಆಕೆಯನ್ನು ಆತ ಬಿಗಿದಪ್ಪಿಕೊಂಡಿರುವುದಾಗಿ ದೂರಲಾಗಿದೆ. ಈ ವೇಳೆ ಬಾಲಕಿ ಬೊಬ್ಬಿಟ್ಟಿದ್ದು, ಅಷ್ಟರಲ್ಲಿ ಯುವಕ ಕಾರು ಸಹಿತ ಪರಾರಿಯಾಗಿದ್ದನು. ಬಾಲಕಿ ಮನೆಗೆ ತಲುಪಿ ವಿಷಯ ತಿಳಿ ಸಿದ್ದು, ಅನಂತರ ಪೊಲೀಸರಿಗೆ ದೂರು ನೀಡಲಾಗಿತ್ತು. ಇದರಂತೆ ಪೋಕ್ಸೋ ಕೇಸು ದಾಖಲಿಸಿಕೊಂಡ ಪೊಲೀಸರು ವಿವಿಧೆಡೆಗಳಲ್ಲಿರುವ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿ ಅನ್ವರ್‌ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.