ಶಾಲೆ ಆವರಣದಲ್ಲಿರುವ  ಆಂಗಡಿಯಿಂದ ಕಳವು: ಸೆರೆಗೀಡಾದ ಆರೋಪಿ  ಠಾಣೆಯಿಂದ ಪರಾರಿಯಾಗಿ ಮತ್ತೆ ಬಂಧನ

ಕಾಸರಗೋಡು: ಶಾಲೆ ಆವರಣದ ಅಂಗಡಿಯಿಂದ ಕಳವು ನಡೆಸಿದ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿಯಾ ಗಿದ್ದು, ಕೂಡಲೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಒಂದು ಗಂಟೆಯೊಳಗೆ ಮತ್ತೆ ಬಂಧಿಸಿದ್ದಾರೆ. ಇದರಿಂದ ಕಳವು ಪ್ರಕರಣದ ಹೊರತು ಪೊಲೀಸ್ ಠಾಣೆಯಿಂದ ಪರಾರಿಯಾದ ಆರೋಪದಂತೆಯೂ  ಕೇಸು ದಾಖಲಿಸಲಾಗಿದೆ.

ಬೇಕಲ ತಾಯಲ್ ಮವ್ವಲ್ ನಿವಾಸಿಯೂ ತಚ್ಚಂಗಾಡ್ ಅರವತ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಪಿ.ಕೆ. ಮುಹಮ್ಮದ್ ಸಫ್ವಾನ್ (19) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಈತ ಬೇಕಲ ಶಿಕ್ಷಣ ಉಪಜಿಲ್ಲೆಯ ತಚ್ಚಂಗಾಡ್ ಸರಕಾರಿ ಶಾಲೆಯ ಆವರಣದಲ್ಲಿರುವ ಅಂಗಡಿಯಿಂದ ಕಳವು ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಈತನನ್ನು ಪೊಲೀಸರು ಬಂಧಿಸಿ ಠಾಣೆಗೆ  ತಲುಪಿಸಿದರೂ ಅಲ್ಲಿಂದ ಈತ ಓಡಿ ಪರಾರಿಯಾಗಿದ್ದು ಬಳಿಕ ಪೊಲೀಸರು ನಿನ್ನೆ ರಾತ್ರಿ 8.30 ೦ರ ವೇಳೆ  ತೃಕ್ಕನ್ನಾಡ್  ಮಲಾಂಕುನ್ನು ಎಂಬಲ್ಲಿಂದ ಸೆರೆಹಿಡಿದಿದ್ದಾರೆ. ಈ ಘಟನೆ ಕುರಿತು ಪೊಲೀಸರು ನೀಡುವ ಮಾಹಿತಿ ಹೀಗಿದೆ- ಗುರುವಾರ ರಾತ್ರಿ ತಚ್ಚಂಗಾಡ್ ಶಾಲೆ ಕಂಪೌಂಡ್‌ನೊಳಗೆ  ಪಳ್ಳಿಕೆರೆ ಪಂಚಾಯತ್ ಸಿಡಿಎಸ್ ನಡೆಸುವ ಅಂಗಡಿಯಲ್ಲಿ ಕಳವು ನಡೆದಿತ್ತು. ಅಂಗಡಿಯ ಮುಂಭಾಗದ ಗಾಜಿನ ಕ್ಯಾಬಿನ್ ಪುಡಿಗೈದು ಒಳನುಗ್ಗಿ 1000 ರೂಪಾಯಿ ಹಾಗೂ 25 ಸಾವಿರ ರೂಪಾಯಿಗಳ ಸಾಮಗ್ರಿ ಕಳವು  ನಡೆಸಿದ್ದನು. ಈ ಬಗ್ಗೆ ಅಂಗಡಿಯವರು ನೀಡಿದ ದೂರಿನಂತೆ ಬೇಕಲ ಪೊಲೀ ಸರು ಕೇಸು ದಾಖಲಿಸಿದ್ದರು. ತನಿಖೆ ಯಂಗವಾಗಿ ಎಸ್‌ಐ ಬಾಬು ಪಡಚ್ಚೇರಿ ನೇತೃತ್ವದ ಪೊಲೀಸರು ಶಾಲೆ ಬಳಿಯ ಸಿಸಿ ಕ್ಯಾಮರಾ ದೃಶ್ಯ ಪರಿಶೀಲಿಸಿದಾಗ ಪ್ರಾಯ ಪೂರ್ತಿಯಾಗದ ಓರ್ವನ ಸಹಿತ ಇಬ್ಬರು ಶಾಲೆ ವರಾಂಡದಲ್ಲಿ ನಡೆದು ಹೋಗುವ ದೃಶ್ಯ ಕಂಡುಬಂ ದಿದೆ. ಈ ಇಬ್ಬರಲ್ಲಿ ಓರ್ವ ಸಫ್ವಾನ್ ಆಗಿದ್ದಾನೆಂದು ಖಚಿತಗೊಂಡಿತು. ಕೂಡಲೇ ಪೊಲೀಸರು ಈತನನ್ನು ಬಂಧಿಸಿ ಠಾಣೆಗೆ ತಲುಪಿಸಿದ್ದು ಹೇಳಿಕೆ ದಾಖಲುಗೊಂಡ ಬಳಿಕ ಈತನನ್ನು ಅಲ್ಲಿ ಕುಳ್ಳಿರಿಸಲಾಗಿತ್ತು. ಈ ಮಧ್ಯೆ ಪೊಲೀಸರ ಕಣ್ತಪ್ಪಿಸಿ ಆರೋಪಿ ನಿನ್ನೆ ರಾತ್ರಿ 7.30ರ ವೇಳೆ ಠಾಣೆಯಿಂದ ಪರಾರಿಯಾಗಿದ್ದಾನೆ.  ಘಟನೆ ಅರಿವಿಗೆ ಬಂದ ಪೊಲೀಸರು ವಿವಿಧೆಡೆ ಶೋಧ ನಡೆಸಿದರು. ಬಳಿಕ ಮಲಾಂಕುನ್ನು ರೈಲ್ವೇ ಹಳಿ ಬಳಿಯಿಂದ ಸಫ್ವಾನ್‌ನನ್ನು ಬೇಕಲ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ. ಶೈನಿ ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದಾರೆ.

You cannot copy contents of this page