ಶಾಲೆ ಚೆಯರ್‌ಮೆನ್ ನಿಧನ
ಕುಂಬಳೆ: ಕೊಡ್ಯಮ್ಮೆ ಕೊಹಿನೂರ್ ಇಂಗ್ಲಿಷ್ ಮೀಡಿಯಂ ಶಾಲೆಯ ಚೆಯರ್ ಮೆನ್ ಕೊಡ್ಯಮ್ಮೆ ನಿವಾಸಿ ಅಬೂಬಕರ್ ಹಾಜಿ (70) ಹೃದಯಾಘಾತದಿಂದ ನಿಧನಹೊಂದಿದರು. ಇಂದು ಮುಂಜಾನೆ 3 ಗಂಟೆಗೆ ಇವರಿಗೆ ಎದೆನೋವು ಉಂಟಾಗಿತ್ತೆನ್ನಲಾಗಿದೆ. ಕೂಡಲೇ ಎದ್ದು ಮನೆಯವರಿಗೆ ವಿಷಯ ತಿಳಿಸಿದ್ದರು. ಆದರೆ ಅಲ್ಪ ಹೊತ್ತಿನಲ್ಲೇ ನಿಧನ ಸಂಭವಿಸಿದೆ.
ಕೊಡ್ಯಮ್ಮೆ ನೂರ್ ಮಸೀದಿಯ ಮಾಜಿ ಅಧ್ಯಕ್ಷರೂ ಆಗಿದ್ದ ಇವರು ಪ್ರಸ್ತುತ ಅದರ ಚೆಯರ್‌ಮೆನ್ ಆಗಿದ್ದಾರೆ. ಮುಹಿಮ್ಮಾತ್ ಮುಂಬೈ ಜಮಾಯತ್ ಕಮಿಟಿಯ ಮಾಜಿ ಅಧ್ಯಕ್ಷರೂ ಅಗಿದ್ದಾರೆ.
ಮೃತರು ಪತ್ನಿ ಆಯಿಶಾ, ಮಕ್ಕಳಾದ ಮೊಹಮ್ಮದ್ ಹನೀಫ್, ಅಬ್ದುಲ್ ರಹ್ಮಾನ್, ಖಲೀಲ್, ಅನ್ವರ್, ಅಮೀನ್, ತಾಜುದ್ದೀನ್, ಸಾದಿಯ, ಅಳಿಯ-ಸೊಸೆಯಂ ದಿರಾದ ಸಾಜಿದ, ಸಹದಿರಾ, ಸುಹರಾ, ಸಫೂರ, ಶೀi, ಸಹನ, ಅಹರಾಫ್ ಎ.ಕೆ, ಸಹೋದರರಾದ ಇಬ್ರಾಹಿಂ ಹಾಜಿ, ಮೂಸ ಹಾಜಿ, ಯೂಸಫ್ ಹಾಜಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.