ಶಿಕ್ಷಣ ಸಚಿವ ಇಂದು ಜಿಲ್ಲೆಯಲ್ಲಿ
ಕಾಸರಗೋಡು: ರಾಜ್ಯ ಶಿಕ್ಷಣ, ಉದ್ಯೋಗ ಖಾತೆ ಸಚಿವ ವಿ. ಶಿವನ್ ಕುಟ್ಟಿ ಜಿಲ್ಲೆಗೆ ಆಗಮಿಸಿದ್ದು, ಇಂದು ಹಾಗೂ ನಾಳೆ ವಿವಿಧೆಡೆ ನಡೆಯುವ ವಿವಿಧ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವರು.
ಮಂಜೇಶ್ವರ ಕುಂಜತ್ತೂರು ಕಣ್ವತೀಥ ಜಿಎಲ್‌ಪಿ ಶಾಲೆಗಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ನಿರ್ಮಿಸಿದ ಕಟ್ಟಡ, ಉಪ್ಪಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಕಿಫ್‌ಬಿ ಯೋಜನೆಯಲ್ಲಿ ನಿರ್ಮಿಸಿದ ಕಟ್ಟಡ ಹಾಗೂ ಬಂಬ್ರಾಣ ಜಿಎಲ್‌ಪಿ ಶಾಲೆಗೆ ಕಿಫ್‌ಬಿ ಫಂಡ್ ಬಳಸಿ ನಿರ್ಮಿಸಿದ ಕಟ್ಟಡವನ್ನು ಇಂದು ಬೆಳಿಗ್ಗೆ ಸಚಿವ ಉದ್ಘಾಟಿಸಿದರು. ಇಂದು ಮಧ್ಯಾಹ್ನ 2 ಗಂಟೆಗೆ ಮೊಗ್ರಾಲ್ ಕಂಬಾರು ಸರಕಾರಿ ಎಲ್‌ಪಿ ಶಾಲೆಯ ಸುವರ್ಣ ಮಹೋತ್ಸವವನ್ನು ಸಚಿವ ಉದ್ಘಾಟಿಸುವರು. ೩ ಗಂಟೆಗೆ ಬೋವಿ ಕ್ಕಾನ ಐಡೆಡ್ ಶಾಲೆ ಕಟ್ಟಡ, 3.45ಕ್ಕೆ ಕಾನತ್ತೂರು ಜಿಎಲ್‌ಪಿ ಶಾಲೆ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.