ಶಿರಿಯ ಸಮುದ್ರದಲ್ಲಿ ಕೆಟ್ಟು ಉಳಿದುಕೊಂಡ ಟಗ್ಗ್ ಬೋಟ್: ದಡಕ್ಕೆ ತರುವ ಪ್ರಯತ್ನ ಮುಂದುವರಿಕೆ

ಉಪ್ಪಳ: ಶಿರಿಯ ಸಮುದ್ರದಲ್ಲಿ ಸಿಕ್ಕಿಹಾಕಿದ ಟಗ್ಗ್ ಬೋಟನ್ನು ದಡಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಕೊಲ್ಲಂನಿAದ ಮುಂಬೈಗೆ ತೆರಳುತ್ತಿದ್ದ ಟಗ್ಗ್ ಬೋಟ್ ಬಂದ್ಯೋಡು ಬಳಿಯ ಶಿರಿಯಾ ಕರಾವಳಿ ಪೋಲೀಸ್ ಠಾಣೆ ವ್ಯಾಪ್ತಿಯ ಸಮುದ್ರದ ಮಧ್ಯೆ ನಿನ್ನೆ ಬೆಳಗ್ಗೆ ಸಿಕ್ಕಿಹಾಕಿಕೊಂಡಿದೆ. ಬೋಟ್ ಶಿರಿಯಾದಿಂದ ಸುಮಾರು 5 ನಾಟಿಕಲ್ ಮೈಲು ದೂರದಲ್ಲಿ ತಾಂತ್ರಿಕ ದೋಷದಿಂದಾಗಿ ಸಮುದ್ರ ಮಧ್ಯೆ ಸಿಲುಕಿಕೊಂಡಿದೆ. ಬೋಟ್‌ನಲ್ಲಿ ಸುಮಾರು 10ರಷ್ಟು ಕಾರ್ಮಿಕರು ಇದ್ದಾರೆ. ಮಾಹಿತಿ ಅರಿತ ಕರಾವಳಿ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದ್ದು, ತನಿಖೆಯಲ್ಲಿ ಎಂಜಿನ್ ಕೆಟ್ಟು ಹೋಗಿರುವುದೇ ಉಳಿದುಕೊಳ್ಳಲು ಕಾರಣವೆನ್ನಲಾಗಿದೆ. ಬೃಹತ್ ಗಾತ್ರದ ಟಗ್ಗ್ ಬೋಟ್ ಆಗಿರುವುದರಿಂದ ಅದನ್ನು ದಡಕ್ಕೆ ತರಲು ಕಷ್ಟಕರ ವಾಗಿದೆ. ಕರಾವಳಿ ಪೊಲೀಸರ ಸಹಾಯ ದೊಂದಿಗೆ ಬೋಟ್‌ನ ಇಂಜಿನನ್ನು ಕಳಚಿ ದುರಸ್ಥಿಗಾಗಿ ಮಂಗಳೂರಿಗೆ ಕೊಂಡುಹೋಗಿದ್ದು, ಇಂದು ಸರಿಪಡಿಸಿ ಬೋಟ್ ಮುಂಬೈಗೆ ಪ್ರಯಾಣ ಮುಂದು ವರಿಸುವ ಸಾಧ್ಯತೆ ಇದೆ. ಅದರಲ್ಲಿರುವ ಎಲ್ಲಾ ಕಾರ್ಮಿ ಕರು ಸುರಕ್ಷಿತವಾಗಿದ್ದಾರೆಂದು ಶಿರಿಯ ಕರಾವಳಿ ಪೋಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page