ಶಿರೂರು ದುರಂತ ಕಣ್ಣ ಮುಂದಿರುವಂತೆ ಚೇಡಿಕಾನದಲ್ಲೂ ಗುಡ್ಡೆ ಕುಸಿತ ಭೀತಿ

ಕಾಸರಗೋಡು: ಕರ್ನಾಟಕದ ಶಿರೂರ್‌ನಲ್ಲಿ 11 ದಿನಗಳ ಹಿಂದೆ ಸಂಭವಿಸಿದ ಗುಡ್ಡೆ ಕುಸಿತ ದುರಂತ ದೇಶದ ಜನರ ಮನಸ್ಸಿಗೆ ಘಾಸಿ ಉಂಟುಮಾಡಿರುವಂತೆ  ಬದಿಯಡ್ಕ ಬಳಿಯ ನೆಕ್ರಾಜೆ ಚೇಡಿಕಾನದಲ್ಲಿ ವ್ಯಕ್ತಿಗಳು ಹಾಗೂ ಮಣ್ಣು ಮಾಫಿಯ ಸೇರಿ ಇನ್ನೊಂದು ದುರಂತಕ್ಕೆ ಆಹ್ವಾನ ನೀಡುತ್ತಿದ್ದಾರೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.

ಬದಿಯಡ್ಕ-ಚೆರ್ಕಳ ರಸ್ತೆಯ ನೆಕ್ರಾಜೆ ಬಳಿಯ ಚೇಡಿಕಾನ ಶಾಲೆಯ ಮುಂಭಾಗದಿಂದ ಮಣ್ಣು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆಯೆಂದು ಸ್ಥಳೀಯರು ದೂರಿದ್ದಾರೆ. ಈ ಹಿಂದೆ ವ್ಯಕ್ತಿಗಳು ಹಾಗೂ ಮಣ್ಣು  ಮಾಫಿಯಾ ತಂಡ ಇಲ್ಲಿಂದ ಮಣ್ಣು ಸಾಗಿಸಿದ್ದರೆ ಈಗ ರಾಷ್ಟ್ರೀಯ ಹೆದ್ದಾರಿಗೆ ಬೇಕಾಗಿ ಮಣ್ಣು ಸಾಗಿಸಲಾಗುತ್ತಿದೆಯೆಂದು ಸ್ಥಳೀಯರು ತಿಳಿಸುತ್ತಾರೆ. ಇದರಿಂದಾಗಿ ಯಾವುದೇ ಕ್ಷಣದಲ್ಲಿ ಗುಡ್ಡೆ ಕುಸಿದು ಬೀಳುವಂತಹ ಸ್ಥಿತಿಗೆ ತಲುಪಿದೆ. ಇದೇ ಪರಿಸರದಲ್ಲಿ ಸುಮಾರು 15 ಮನೆಗಳು ಇದೆ. ಗುಡ್ಡೆ ಕುಸಿದು ಬಿದ್ದರೆ ಬದಿಯಡ್ಕ ಚೆರ್ಕಳ ರಸ್ತೆಯಲ್ಲಿ ಸಂ ಚಾರ ಮೊಟಕು ಹಾಗೂ ಸ್ಥಳೀಯ ಮನೆಗಳಿಗೂ   ತೊಂದರೆ ಉಂಟಾಗ ಬಹುದೆಂದು ಸ್ಥಳೀಯರು ಮುನ್ನೆ ಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳು ಕೂಡಲೇ ಕಣ್ಣು ತೆರೆಯಬೇಕಾಗಿದೆ ಯೆಂದೂ ಅವರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page