ಶಿರೂರು ಭೂಕುಸಿತ: ಲಾರಿಯ ಕ್ಯಾಬಿನ್‌ನೊಳಗೆ ಪತ್ತೆಯಾದ ಅರ್ಜುನ್ ಮೃತದೇಹ; ಡಿಎನ್‌ಎ ತಪಾಸಣೆ ಬಳಿಕ ನಾಳೆ ಊರಿಗೆ
ಮಂಗಳೂರು: ಕಾರವಾರ ಸಮೀಪ ಶಿರೂರಿನ ಗಂಗಾವಲಿ ನದಿಯಲ್ಲಿ ಪತ್ತೆಯಾದ ಕಲ್ಲಿಕೋಟೆ ನಿವಾಸಿ ಅರ್ಜುನ್ ಎಂಬವರ ಮೃತದೇಹವನ್ನು ಕಾರವಾರದ ಆಸ್ಪತ್ರೆಯಲ್ಲಿರಿಸಿದ್ದು, ನಾಳೆ ಊರಿಗೆ ತಲುಪಿಸ ಲಾಗುವುದು. ಮೃತದೇಹವನ್ನು ಡಿಎನ್‌ಎ ತಪಾಸಣೆ ನಡೆಸಿ ಅದು ಅರ್ಜುನರದ್ದೇ ಎಂದು ಖಚಿತಪಡಿಸ ಲಿರುವ ಕ್ರಮ ಆರಂಭಿಸಲಾಗಿದೆ. ಎರಡು ದಿನಗಳೊಳಗೆ ಡಿಎನ್‌ಎ ತಪಾಸಣೆಯ ಫಲಿತಾಂಶ ಲಭಿಸಿದ ಬಳಿಕ ಮೃತದೇಹವನ್ನು ಸಂಬಂಧಿ ಕರಿಗೆ ಬಿಟ್ಟುಕೊಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಗಾವಲಿ ಹೊಳೆಯಲ್ಲಿ ಡ್ರಜ್ಜರ್ ಬಳಸಿ ನಡೆಸಿದ ಶೋಧ ವೇಳೆ ನಿನ್ನೆ ಅಪರಾಹ್ನ ಲಾರಿಯ ಕ್ಯಾಬಿನ್ ಪತ್ತೆಹಚ್ಚಲಾಗದ್ದು, ಅದರೊಳಗೆ ಅರ್ಜುನ್‌ರ ಮೃತದೇಹ ಜೀರ್ಣಾವ ಸ್ಥೆಗೊಂಡ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಕಳೆದ ಜುಲೈ 16ರಂದು ಶಿರೂರು ಬಳಿ ರಸ್ತೆ ಬದಿಯ ಗುಡ್ಡೆ ಕುಸಿದು ಅರ್ಜುನ್ ಚಲಾಯಿಸುತ್ತಿದ್ದ ಲಾರಿ ಮೇಲೆ ಬಿದ್ದಿತ್ತು. ಈ ವೇಳೆ ಲಾರಿ ಮಣ್ಣಿನೊಂದಿಗೆ ಕೊಚ್ಚಿ ಹೋಗಿ ಸಮೀಪದಲ್ಲಿರುವ ಗಂಗಾವಲಿ ನದಿಗೆ ಸೇರಿತ್ತು. ಅಂದಿನಿಂದಲೇ ಶೋಧ ಕಾರ್ಯ ಆರಂಭಿಸಲಾಗಿದೆ ಯಾದರೂ ಹವಾಮಾನ ವೈಪರೀತ್ಯದ ಕಾರಣದಿಂದ ಕಾರ್ಯಾಚರಣೆ ಮಂದಗತಿಯಲ್ಲಿ ಸಾಗಿತ್ತು.
ಅನಂತರ ಮುಳುಗುತಜ್ಞ ಈಶ್ವರ ಮಲ್ಪೆ ಎಂಬವರು ಕೂಡಾ ನದಿಯಲ್ಲಿ ಶೋಧ ನಡೆಸಿದ್ದರು. ಬಳಿಕ ಗೋವಾದಿಂದ ಡ್ರಜ್ಜರ್ ತಲುಪಿಸಿ ನದಿಯಲ್ಲಿ ನಡೆಸಿದ ಶೋಧ ವೇಳೆ ಅರ್ಜುನ್‌ರ ಲಾರಿ ಪತ್ತೆಯಾಗಿದ್ದು, ಅದರೊಳಗೆ ಮೃತದೇಹವು ಕೂಡಾ ಕಂಡುಬಂದಿದೆ. ಘಟನೆ ನಡೆದು ೭೨ ದಿನಗಳ ನಂತರ ಲಾರಿಯ ಅವಶಿಷ್ಟ ಗಳನ್ನು ಪತ್ತೆಹಚ್ಚಲಾಗಿದೆ. ಕ್ಯಾಬಿನ್ ಪೂರ್ಣವಾಗಿ ನಜ್ಜುಗುಜ್ಜಾ ಗಿದೆ. ಲಾರಿ ನದಿಯಲ್ಲಿ 12 ಮೀಟರ್ ಆಳದಲ್ಲಿ ಮಣ್ಣಿನಡಿ ಹುದುಗಿಹೋಗಿತ್ತು. ಲಾರಿಯನ್ನು ಪೂರ್ಣವಾಗಿ ಇಂದು ಬೆಳಿಗ್ಗೆ ಮೇಲಕ್ಕೆ ತರಲಾಯಿತು.
ಕಲ್ಲಿಕೋಟೆಯ ಅರ್ಜುನ್ ಮುಕ್ಕಂ ನಿವಾಸಿ ಮನಾಫ್ ಎಂಬವರ ಲಾರಿಯ ಚಾಲಕನಾಗಿದ್ದರು. ಕರ್ನಾಟಕದಿಂದ ಮರ ತರಲೆಂದು ಜುಲೈ ೮ರಂದು ಅರ್ಜುನ್ ತೆರಳಿದ್ದರು. 16ರಂದು ಕೊನೆಯದಾಗಿ ಮನೆಗೆ ಕರೆಮಾಡಿ ಮಾತನಾಡಿದ್ದರು. ಅನಂತರ ಅವರ ಬಗ್ಗೆ ಯಾವುದೇ ಮಾಹಿತಿ ಲಭಿಸಿರಲಿಲ್ಲ.
ಆದರೆ ಅರ್ಜುನ್‌ಗೆ ಏನು ಸಂಭ ವಿಸಿತೆಂದು ತಿಳಿಯಲು ಸಾಧ್ಯವಾಗದೆ ಕುಟುಂಬ ತೀವ್ರ ಆತಂಕಕ್ಕೊಳಗಾಗಿತ್ತು. ಕೊನೆಗೂ ಅರ್ಜುನ್ ಭೂಕುಸಿ ತಕ್ಕೀಡಾಗಿ ಮೃತಪಟ್ಟಿದ್ದಾರೆಂದು ತಿಳಿಯುವುದ ರೊಂದಿಗೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.