ಶಿರೂರು ಭೂ ಕುಸಿತ: ಕಲ್ಲಿಕೋಟೆ ನಿವಾಸಿ ಇನ್ನೂ ನಾಪತ್ತೆ

ಕಾರವಾರ: ಕರ್ನಾಟಕದ ಶಿರೂರುನಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಕಲ್ಲಿಕೋಟೆ ನಿವಾಸಿಯಾದ ಲಾರಿ ಚಾಲಕ ಅರ್ಜುನ್ ಎಂಬವರು ನಾಪತ್ತೆಯಾಗಿ ಮೂರು ವಾರಗಳಾದರೂ ಅವರನ್ನು ಪ್ತೆಹಚ್ಚಲಾಗಲಿಲ್ಲ. ಹವಾಮಾನ ಅನುಕೂಲವಾಗಿದ್ದರೆ ಶಿರೂರು ಹೊಳೆಯಲ್ಲಿ ಶೋಧ ಪುನರಾರಂಭಿಸುವುದಾಗಿ ಕರ್ನಾಟಕ ಸರಕಾರ ತಿಳಿಸಿದೆ. ಹೊಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದು ಶೋಧ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಕರ್ನಾಟಕದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಕೇರಳ ಅರಣ್ಯ ಸಚಿವ ಎ.ಕೆ. ಶಶೀಂದ್ರನ್‌ರಿಗೆ ಲಿಖಿತವಾಗಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಶಿರೂರು ಹೊಳೆಯಲ್ಲಿ ಜೀರ್ಣಿಸಿದ ಸ್ಥಿತಿಯಲ್ಲಿ ನಿನ್ನೆ ಮೃತದೇಹವೊಂದು ಪತ್ತೆಯಾಗಿರುವುದಾಗಿ ವರದಿಯಾಗಿದೆ. ಆದರೆ ಅದು ಯಾರದ್ದು ಎಂಬ ಬಗ್ಗೆ ಇನ್ನೂ ಸ್ಪಷ್ಟಪಡಿಸಲಾಗಲಿಲ್ಲ.

You cannot copy contents of this page