ಶಿರೂರು ಭೂ ಕುಸಿತ: ನಾಪತ್ತೆಯಾದ ಕಲ್ಲಿಕೋಟೆಯ ಅರ್ಜುನ್ಗಾಗಿ ಹೊಳೆಯಲ್ಲಿ ಶೋಧ ಪುನರಾರಂಭ
ಕಾರವಾರ: ಕರ್ನಾಟಕದ ಶಿರೂರು ಸಮೀಪ ಇತ್ತೀಚೆಗೆ ಸಂಭವಿಸಿದ ಭೂ ಕುಸಿತ ದುರಂತ ವೇಳೆ ನಾಪತ್ತೆಯಾದ ಕಲ್ಲಿಕೋಟೆ ನಿವಾಸಿ ಅರ್ಜುನ್ ಎಂಬವರಿಗಾಗಿ ಶೋಧ ಕಾರ್ಯ ಇಂದು ಬೆಳಿಗ್ಗೆ ಪುನರಾರಂಭಿಸಲಾಗಿದೆ. ಮುಳುಗುತಜ್ಞ ಈಶ್ವರ ಮಲ್ಪೆ ನೇತೃತ್ವದಲ್ಲಿ ಗಂಗಾವಲಿ ಹೊಳೆಯಲ್ಲಿ ಶೋಧ ನಡೆಸಲಾಗುತ್ತಿದೆ. ನೌಕಾ ಪಡೆಯ ಒಂದು ಡೈವಿಂಗ್ ತಂಡ ಸಹಿತ ಮೀನುಕಾರ್ಮಿಕರ ತಂಡ, ಎಸ್ಡಿಆರ್ಎಫ್, ಎನ್ಡಿಆರ್ಎಫ್ ತಂಡವೂ ಶೋಧ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದೆ. ಶೋಧಕ್ಕಾಗಿ ಈಶ್ವರ ಮಲ್ಪೆಯವರ ಜೊತೆಗೆ ಮೂವರು ಮುಳುಗು ತಜ್ಞರು ಹೊಳೆಗಿಳಿದಿದ್ದಾರೆ
ಅರ್ಜುನ್ ಜೊತೆಗೆ ಭೂ ಕುಸಿತ ವೇಳೆ ನಾಪತ್ತೆಯಾದ ಕರ್ನಾಟಕ ನಿವಾಸಿಗಳಾದ ಲೋಕೇಶ್, ಜಗನ್ನಾಥ ಎಂಬಿವರಿಗಾಗಿಯೂ ಶೋಧ ನಡೆಸಲಾಗುತ್ತಿದೆ. ಗಂಗಾವಲಿ ಹೊಳೆಯಲ್ಲಿ ಈಶ್ವರ ಮಲ್ಪೆಯವರ ನೇತೃತ್ವದಲ್ಲಿ ನಿನ್ನೆ ನಡೆಸಿದ ಶೋಧ ವೇಳೆ ಅರ್ಜುನ್ರ ಲಾರಿಯ ಹೈಡ್ರೋಲಿಕ್ ಜಾಕಿ ಪತ್ತೆಯಾಗಿತ್ತು. ಜಾಕಿ ಪತ್ತೆಯಾದ ಹಿನ್ನೆಲೆಯಲ್ಲಿ ಲಾರಿ ಕೂಡಾ ಇದೇ ಪ್ರದೇಶದಲ್ಲಿ ಇರಬಹುದು ಎಂಬ ನಿರೀಕ್ಷೆಯಿರಿಸಲಾಗಿದೆ. ಶಿರೂರಿನಲ್ಲಿ ಜುಲೈ 16ರಂದು ಭೂ ಕುಸಿತ ಸಂಭವಿಸಿತ್ತು. ಬೆಂಗಳೂರು- ಶಿರೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಸಮೀಪದ ಗುಡ್ಡೆ ಕುಸಿದು ಬಿದ್ದಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ಸಂಚರಿಸುತ್ತಿದ್ದ ಅರ್ಜುನ್ರ ಲಾರಿಯ ಮೇಲೂ ಮಣ್ಣು ಬಿದ್ದಿತ್ತೆನ್ನಲಾಗಿದೆ. ಇದೇ ಸಂದರ್ಭದಲ್ಲಿ ಸಮೀಪದ ಗಂಗಾವಲಿ ಹೊಳೆಯಲ್ಲೂ ಭಾರೀ ನೀರಿನ ಹರಿವಿತ್ತು. ಇದರಿಂದ ನದಿಯಲ್ಲಿ ಶೇಕರಣೆಯಾದ ಮಣ್ಣಿನಡಿ ಲಾರಿ ಹೂತುಹೋಗಿರಬಹುದೆಂದೂ ಅಂದಾಜಿಸಲಾಗಿದೆ. ಈ ಹಿನ್ನೆಲೆ ಯಲ್ಲಿ ಕಳೆದ ಹಲವು ದಿನಗಳಿಂದ ಶೋಧ ನಡೆಸಲಾಗುತ್ತಿದೆ. ಈ ಮಧ್ಯೆ ಪ್ರತಿಕೂಲ ಹವಾಮಾನದಿಂದಾಗಿ ಶೋಧ ಕಾರ್ಯಾಚರಣೆ ಸ್ಥಗಿತಗೊಳಿ ಸಲಾಗಿತ್ತು. ಇದೀಗ ಹವಾಮಾನ ಅನುಕೂಲವಾಗಿರುವ ಹಿನ್ನೆಲೆಯಲ್ಲಿ ಹೊಳೆಯಲ್ಲಿ ಶೋಧ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದೆ.