ಶಿಲ್ಪಿ ಐಲ ಆನಂದ ಆಚಾರ್ಯ ನಿಧನ

ಮಂಗಲ್ಪಾಡಿ: ಪ್ರತಾಪನಗರ ನಿವಾಸಿ ಕಾಷ್ಠ ಶಿಲ್ಪಿ ಐಲ ಆನಂದ ಆಚಾರ್ಯ [89] ನಿನ್ನೆ ಸಂಜೆ ನಿಧನರಾದರು. ಉಸಿರಾಟ ಸಮಸ್ಯೆಯಿಂದ ಉಪ್ಪಳದ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಹೊಂದಿದರು. ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಮರದ ಕೆಲಸಗಳನ್ನು ನಿರ್ವಹಿಸುತ್ತಿರುವ ಶಿಲ್ಪಿಯಾಗಿದ್ದಾರೆ. ಶ್ರೀ ವಿಶ್ವಕರ್ಮ ಸಮಾಜ ಸಭಾ ಪ್ರತಾಪನಗರ ಮಂಗಲ್ಪಾಡಿ ಇದರ ಸ್ಥಾಪಕ ಉಪಾಧ್ಯಕ್ಷರು, ಬಂಗ್ರಮAಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ಕ್ಷೇತ್ರದ ಮಾಜಿ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ಮೃತರು ಮಕ್ಕಳಾದ ಸುರೇಂದ್ರ ಆಚಾರ್ಯ, ದಿವ್ಯಶ್ರೀ, ಸೊಸೆ ಕಲಾವತಿ, ಅಳಿಯ ಗೋಪಾಲಕೃಷ್ಣ ಆಚಾರ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page