ಶೂ ಧರಿಸಿದ ವಿದ್ಯಾರ್ಥಿಗೆ ಹಲ್ಲೆ: ನೀಲೇಶ್ವರದಲ್ಲಿ ಆರು ವಿದ್ಯಾರ್ಥಿಗಳ ವಿರುದ್ಧ ಕೇಸು
ಕಾಸರಗೋಡು: ಶಾಲೆಗೆ ಶೂ ಧರಿಸಿ ಬಂದರೆಂಬ ಕಾರಣದಿಂದ ವಿದ್ಯಾರ್ಥಿಯನ್ನು ತಂಡ ಸೇರಿ ಹಲ್ಲೆಗೈದ ಘಟನೆಯಲ್ಲಿ ಆರು ಸಹಪಾಠಿಗಳ ವಿರುದ್ಧ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಕೋಟಪ್ಪುರಂ ಸಿ.ಎಚ್. ಸ್ಮಾರಕ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಅಜಾನೂರು ಇಟ್ಟಮ್ಮಲ್ ನಿವಾಸಿ ಕೆ. ಮೊಹಮ್ಮದ್ ಶಹೀನ್ (16)ನಿಗೆ ಆಕ್ರಮಿಸಲಾಗಿತ್ತು. ಸೋಮವಾರ ಸಂಜೆ ಘಟನೆ ನಡೆದಿದೆ. ಶಾಲೆ ಬಿಟ್ಟ ಬಳಿಕ ನೀಲೇಶ್ವರ ಪೇಟೆಯಲ್ಲಿ ವಿದ್ಯಾರ್ಥಿಯನ್ನು ತಡೆದು ನಿಲ್ಲಿಸಿ ಆಕ್ರಮಣ ನಡೆಸಲಾಗಿತ್ತೆನ್ನಲಾಗಿದೆ.