ಶೆಡ್‌ನಿಂದ ಹಿಂದಕ್ಕೆ ಚಲಾಯಿಸಿದ ಕಾರಿನಡಿ ಸಿಲುಕಿ ಒಂದೂವರೆ ವರ್ಷದ ಮಗು ಮೃತ್ಯು
ಉಪ್ಪಳ: ಶೆಡ್‌ನಿಂದ ಕಾರನ್ನು ಹಿಂದಕ್ಕೆ ಚಲಾಯಿಸಿದಾಗ ಒಂ ದೂವರೆ ವರ್ಷ ಪ್ರಾಯದ ಮಗು ಕಾರಿನಡಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಸೋಂಕಾಲು ಕೊಡಂಗೆ ರಸ್ತೆಯ ಕೂಡಂಬೈಲು ನಿವಾಸಿಯೂ ಗಲ್ಫ್ ಉದ್ಯೋಗಿಯಾಗಿರುವ ನಿಜಾರ್ ಎಂಬವರ ಪುತ್ರ ಮಸ್ತುಜಾಸಿದ್ ಮೃತ ಪಟ್ಟ ಮಗುವಾಗಿದೆ.
ನಿನ್ನೆ ಸಂಜೆ ೪.೩೦ರ ವೇಳೆ ಈ ಘಟನೆ ನಡೆದಿದೆ. ಮನೆಯ ಶೆಡ್‌ನಿಂದ ನಿಜಾರ್‌ರ ಸಹೋದರ ತೌಸೀಫ್ ಕಾರನ್ನು ಹಿಂದಕ್ಕೆ ತೆಗೆಯುತ್ತಿದ್ದಾಗ ಹಿಂಬದಿಯಲ್ಲಿ ಮಗು ನಿಂತಿತ್ತೆನ್ನ ಲಾಗಿದೆ. ಈ ಬಗ್ಗೆ ತಿಳಿಯದೆ ಕಾರನ್ನು ಹಿಂದಕ್ಕೆ ಚಲಾಯಿಸಿದಾಗ ಮಗು ಅದರಡಿ ಸಿಲುಕಿ ಗಂಭೀರಗಾಯ ಗೊಂಡಿತ್ತು. ಕೂಡಲೇ ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹದ ಅಂತ್ಯ ಸಂಸ್ಕಾರ ಇಂದು ಬೆಳಿಗ್ಗೆ ಕೂಡಂಬೈಲು ಮುಹಿಯುದ್ದೀನ್ ಮಸೀದಿ ಪರಿಸರದಲ್ಲಿ ನಡೆಯಿತು. ಮೃತ ಮಗು ತಂದೆ, ತಾಯಿ ತಸ್ರೀಫ, ಸಹೋದರ ಜಿಶಾನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇದೇ ವೇಳೆ ಅಪಘಾತ ಸಂಬಂಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.