ಶೆಡ್ ಬೆಂಕಿಗಾಹುತಿ : ಭಾರೀ ನಾಶನಷ್ಟ
ಪೆರ್ಲ: ಮನೆ ಸಮೀಪದ ಶೆಡ್ ಬೆಂಕಿಗಾಹುತಿಯಾಗಿ ಭಾರೀ ನಾಶನಷ್ಟ ಸಂಭವಿಸಿದೆ. ವಾಣಿನಗರ ಬಳಿಯ ಪಡ್ರೆ ಇಳಂತೋಡಿಯಲ್ಲಿ ಸುರೇಶ್ ಎಂಬವರ ಮನೆ ಬಳಿಯಿರುವ ಶೆಡ್ ನಿನ್ನೆ ಮುಂಜಾನೆ ಉರಿದು ನಾಶಗೊಂಡಿದೆ. ಶೆಡ್‌ನಲ್ಲಿದ್ದ 2000 ತೆಂಗಿನಕಾಯಿ, ಮೂರು ಗೋಣಿ ಅಡಿಕೆ ಮತ್ತಿತರ ಪೀಠೋಪಕರಣಗಳು ಪೂರ್ಣವಾಗಿ ಉರಿದು ನಾಶಗೊಂಡಿದೆ. ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲಾಯಿತು. ಘಟನೆ ಬಗ್ಗೆ ಸುರೇಶ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.