ಶೌಚಾಲಯ ಹೊಂಡದಲ್ಲಿ ಸಿಲುಕಿಕೊಂಡ ಕಾಡುಹಂದಿ
ಕುಂಬಳೆ: ನೂತನವಾಗಿ ನಿರ್ಮಿಸುತ್ತಿ ರುವ ಮನೆಯ ಸಮೀಪದಲ್ಲಿ ಶೌಚಾಲ ಯಕ್ಕಾಗಿ ತೋಡಿದ ಹೊಂಡಕ್ಕೆ ಕಾಡುಹಂದಿ ಬಿದ್ದು ಸಿಲುಕಿಕೊಂಡಿದೆ.
ಸಾಮಾಜಿಕ ಕಾರ್ಯಕರ್ತನಾದ ಕೊಡ್ಯಮ್ಮೆಯ ಇಬ್ರಾಹಿಂರ ಕೊಡ್ಯಮ್ಮೆ ಉಜಾರಿನಲ್ಲಿರುವ ನೂತನ ಮನೆ ಸಮೀಪದ ಶೌಚಾಲಯ ಹೊಂಡಕ್ಕೆ ಇಂದು ಮುಂಜಾನೆ ಕಾಡುಹಂದಿ ಬಿದ್ದಿದೆ. ಶಬ್ದ ಕೇಳಿ ನೋಡಿದಾಗ ಒಂದು ಅಡಿಯಷ್ಟು ನೀರು ತುಂಬಿದ್ದ ಹೊಂಡದಲ್ಲಿ ಹಂದಿ ಬಿದ್ದಿರುವುದು ಕಂಡುಬಂದಿದೆಯೆಂದು ಇಬ್ರಾಹಿಂ ತಿಳಿಸಿದ್ದಾರೆ. ಈ ಬಗ್ಗೆ ಅವರು ಅಗ್ನಿಶಾಮಕದಳಕ್ಕೆ ಕರೆಮಾಡಿ ವಿಷಯ ತಿಳಿಸಿದರು. ಆದರೆ ಅಲ್ಲಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸುವಂತೆ ನಿರ್ದೇಶಿಸಿದ್ದಾರೆ. ಇದರಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೂ ಯಾರೂ ಫೋನ್ ಎತ್ತಲಿಲ್ಲವೆಂದು ಇಬ್ರಾಹಿಂ ತಿಳಿಸಿದ್ದಾರೆ. ಅನಂತರ ಜಿಲ್ಲಾಧಿಕಾರಿಗೆ ಕರೆ ಮಾಡಿ ವಿಷಯ ತಿಳಿಸಲಾಯಿತು. ಅಲ್ಪ ಹೊತ್ತಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಫೋನ್ ಕರೆಮಾಡಿ ಸಂಪರ್ಕಿಸಿದ್ದಾರೆ. ಬಳಿಕ ಅಧಿಕಾರಿಗಳು ತಲುಪಿ ಹಂದಿಯನ್ನು ಹೊಂಡದಿಂದ ಮೇಲಕ್ಕೆತ್ತಿ ಗೂಡಿನೊಳಗೆ ಬಂಧಿಸಿ ಕೊಂಡೊಯ್ದರು.