ಶ್ರೀ ಕ್ಷೇತ್ರ ಕಾರ್ಮಾರಿನಲ್ಲಿ ಕೂಪನ್ ಬಿಡುಗಡೆ ೧೯ರಂದು

ಮಾನ್ಯ: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ವಾರ್ಷಿಕೋತ್ಸವ ಜನವರಿ 19ರಂದು ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಜರಗಲಿದೆ. ಅದೇ ದಿನ ಬೆಳಗ್ಗೆ 10.30ಕ್ಕೆ ಜೀರ್ಣೋದ್ಧಾರ ಕೆಲಸ ಕಾರ್ಯಗಳಿಗೆ ಧನ ಸಂಗ್ರಹ ನಿಟ್ಟಿನಲ್ಲಿ ಕೂಪನನ್ನು ಸಮಿತಿಯ ಗೌರವ ಅಧ್ಯಕ್ಷ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬಿಡುಗಡೆಗೊಳಿಸಲಿರುವರು. ಸಮಿತಿಯ ಗೌರವ ಸಲಹೆಗಾರ ಉದ್ಯಮಿ ಬಿ ವಸಂತ ಪೈ ಅಧ್ಯಕ್ಷತೆ ವಹಿಸುವರು. ಜೀರ್ಣೋದ್ಧಾರ ಸಮಿತಿಯ ಉದ್ಯಮಿ ಮಧುಸೂದನ ಆಯರ್ ಭಾಗವಹಿಸಲಿರುವರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಮುಕೇಶ್, ರಾಜಶ್ರೀ ಟಿ ರೈ, ಗಣೇಶ್, ಶ್ಯಾಮ ಭಟ್ ಏವುಂಜೆ, ಸಂತೋಷ್ ಕುಮಾರ್ ಎಸ್ ಮಾನ್ಯ ಉಪಸ್ಥಿತರಿರುವರು.

You cannot copy contents of this page