ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ಪೂಜೆ: ಛಾಯಾಚಿತ್ರ ಸಮರ್ಪಣೆ
ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಶ್ರೀ ಕೈಲಾಸ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃಮಂಡಳಿಯ ಆಶ್ರಯದಲ್ಲಿ ಈ ತಿಂಗಳ 8ರಂದು ನಡೆಯಲಿರುವ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆ ಪ್ರಯುಕ್ತ ಪೂಜಿಸುವ ಶ್ರೀ ಲಕ್ಷ್ಮೀದೇವಿಯ ನೂತನ ಛಾಯಾಚಿತ್ರವನ್ನು ಸಮಿತಿ ಅಧ್ಯಕ್ಷೆ ಶಾರದಾ ಎಸ್. ರಾವ್, ನಗರಸಭಾ ಸದಸ್ಯೆ ಸವಿತಾ ಟೀಚರ್, ಕಾರ್ಯ ದರ್ಶಿ ಸೌಮ್ಯಾ ಎಸ್.ಎನ್. ಹೊಳ್ಳ, ಇಂದಿರಾ ಇವರಿಗೆ ಮಹಾಲಸ ಕಾಲೇ ಜಿನ ವಿದ್ಯಾರ್ಥಿ ಸಂದೇಶ್ ಆಚಾರ್ಯ ರಚಿಸಿ ಸಮರ್ಪಿಸಿದರು.
ಈ ವೇಳೆ ಸಮಿತಿಯ ಉಪಾಧ್ಯಕ್ಷೆ ಸೂರ್ಯ ಕಾಂತಿ, ಕೋಶಾಧಿಕಾರಿ ಲೀಲಾ ಸುಜಯ್, ಜೊತೆ ಕಾರ್ಯದರ್ಶಿ ವಿಜಯ ಶೆಟ್ಟಿ, ಸದಸ್ಯೆಯರಾದ ಸವಿತಾ, ಶ್ರೀದೇವಿ ಎಸ್.ರಾವ್, ಪ್ರೇಮಲತ, ವೀಣಾ, ಶಾರದಾ, ಶ್ವೇತಾ, ಅರುಣ ಉಪಸ್ಥಿತರಿದ್ದರು.