ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ರಾಮಾಯಣ ಹರಿಕಥಾ ಸತ್ಸಂಗ ಆರಂಭ
ಕಾಸರಗೋಡು: ವಿಶ್ವಹಿಂದೂ ಪರಿಷತ್ ಕಾಸರಗೋಡು ಪ್ರಖಂಡದ ನೇತೃತ್ವದಲ್ಲಿ ರಾಮಾಯಣ ಕಥೆಯ ಹರಿಕಥಾ ಸತ್ಸಂಗ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಆರಂಭಗೊಂಡಿತು. ನಾಳೆ ಸಮಾಪ್ತಿಗೊಳ್ಳಲಿದೆ. ನಿನ್ನೆ ಸಂಜೆ ಆರಂಭಗೊಂಡ ಕಾರ್ಯಕ್ರಮವನ್ನು ಧಾರ್ಮಿಕ ಮುಂದಾಳು ಡಾ| ಅನಂತ ಕಾಮತ್ ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿದರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಸಹಿತ ಹಲವರು ಮಾತನಾಡಿದರು. ಬಳಿಕ ಲೇಖನ ಆಚಾರ್ಯ ಐಲ ಅವರಿಂದ ‘ಪತಿತೋದ್ಧಾರಕ’ ಎಂಬ ಹರಿಕಥಾ ಸತ್ಸಂಗ ನಡೆಯಿತು. ಇಂದು ಸಂಜೆ ೫ಕ್ಕೆ ಮೇಧಾ ಭಟ್ ನಾಯರ್ಪಳ್ಳ ಅವರಿಂದ ‘ಸೀತಾ ಕಲ್ಯಾಣ’ ಹರಿಕಥಾ ಸತ್ಸಂಗ ನಡೆಯಲಿದೆ. ನಿವೃತ್ತ ಐಎಎಸ್ ಅಧಿಕಾರಿ ಶಶಿಧರ ದೀಪ ಪ್ರಜ್ವಲನೆಗೊಳಿಸುವರು. ಧಾರ್ಮಿಕ ಮುಂದಾಳು ಮೀರಾ ಕಾಮತ್ ಉಪಸ್ಥಿತರಿರುವರು. ನಾಳೆ ಸಂಜೆ ೫ ಗಂಟೆಗೆ ಶ್ರದ್ಧಾ ಭಟ್ ನಾಯರ್ಪಳ್ಳ ಅವರಿಂದ ‘ಸುಂದರ ಕಾಂಡ’ ಹರಿಕಥಾ ಸತ್ಸಂಗ ನಡೆಯಲಿದೆ. ಯಕ್ಷಗಾನ ಅರ್ಥದಾರಿಯೂ ಆಗಿರುವ ಡಾ| ಕೆ.ಎನ್. ಬಲ್ಲಾಳ್ ದೀಪಪ್ರಜ್ವಲನೆಗೊಳಿ ಸುವರು. ಡಾ| ಶಿವರಾಯ ಭಟ್ ಮುಳ್ಳೇರಿಯ ಉಪಸ್ಥಿತರಿರುವರು.