ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಕಳವುಗೈಯ್ಯಲ್ಪಟ್ಟ ಕಾಣಿಕೆ ಹುಂಡಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಕಳವುಗೈಯ್ಯಲಾದ ಕಾಣಿಕೆ ಹುಂಡಿಯನ್ನು ಕಾಸರಗೋಡು ರೈಲು ನಿಲ್ದಾಣ ಪರಿಸರದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ.
ಅಂದಾಜು ಒಂದು ಲಕ್ಷ ರೂ. ತನಕ ಈ ಹುಂಡಿಯಲ್ಲಿ ಇದ್ದಿರಬಹುದೆಂದೂ ಲೆಕ್ಕಹಾಕಲಾಗಿದ್ದು, ಅದನ್ನು ಕಳ್ಳರು ಹುಂಡಿ ಒಡೆದು ಅಪಹರಿಸಿದ್ದಾರೆ. ಮೊನ್ನೆ ರಾತ್ರಿ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಆವರಣದೊಳಗೆ ಮುಖವಾಡ ಧರಿಸಿ ನುಗ್ಗಿದ ಕಳ್ಳರು ಶ್ರೀ ಕ್ಷೇತ್ರದ ಆವರಣದ ಒಳಗೆ ಇರುವ ಶ್ರೀ ಶಾಸ್ತಾ ದೇವರ ಗುಡಿಯ ಎದುರುಗಡೆ ಸ್ಥಾಪಿಸಲಾಗಿದ್ದ ಕಬ್ಬಿಣದಿಂದ ನಿರ್ಮಿಸಲಾದ ಹುಂಡಿಯನ್ನು ಹಾಗೇ ಹೊತ್ತುಕೊಂಡು ಹೋಗಿದ್ದಾರೆ. ರಾತ್ರಿ ೧೨.೩೦ರ ಬಳಿಕ ಇದನ್ನು ಕಳ್ಳರು ಕದ್ದೊಯ್ದಿದ್ದಾರೆ. ಆ ವೇಳೆ ದೇವಸ್ಥಾನದ ಕಾವಲುಗಾರರೂ ದೇವಸ್ಥಾನದಲ್ಲಿದ್ದರು. ಆದರೆ ಅವರ ಗಮನಕ್ಕೆ ಬಾರದೆ ದೇವಸ್ಥಾನದ ಆವರಣಗೋಡೆಯ ಹಿಂದಿನ ಭಾಗದ ಬಾಗಿಲ ಮೂಲಕ ಕಳ್ಳರು ಕಾಣಿಕೆ ಡಬ್ಬಿ ಸಹಿತ ಪರಾರಿಯಾಗಿದ್ದಾರೆ. ಕಳವು ದೃಶ್ಯ ಶ್ರೀ ಕ್ಷೇತ್ರದ ಸಿಸಿಟಿವಿ ಕ್ಯಾಮರಾಗಳಲ್ಲಿ ಗೋಚರಿಸಿದೆ. ಅದನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳ್ಳರ ತಂಡದಲ್ಲಿ ಇಬ್ಬರು ಇದ್ದರು. ಅದರಲ್ಲಿ ಓರ್ವ ಧೋತಿ ಹಾಗೂ ಇನ್ನೋರ್ವ ಪ್ಯಾಂಟ್ ಧರಿಸಿದ್ದನೆಂದೂ ಆದರೆ ಅವರ ಮುಖ ಸ್ಪಷ್ಟವಾಗಿ ಸಿಸಿಟಿವಿ ದೃಶ್ಯದಲ್ಲಿ ಮೂಡಿ ಬಂದಿಲ್ಲವೆಂದೂ ಪೊಲೀ ಸರು ಹೇಳಿದ್ದಾರೆ. ದೇವಸ್ಥಾನದ ಅಧಿಕೃತರು ಈ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದಾರೆ.
ಹುಂಡಿಯನ್ನು ರೈಲು ನಿಲ್ದಾಣ ಬಳಿ ಉಪೇಕ್ಷಿಸಿದ ಕಳ್ಳರು ಬಳಿಕ ಅಲ್ಲಿಂದ ರೈಲಿನಲ್ಲಿ ಪರಾರಿಯಾಗಿರಬಹು ದೆಂದು ಪೊಲೀಸರು ಶಂಕಿಸುತ್ತಿದ್ದಾರೆ. ಕುಂಬಳೆಗೆ ಸಮೀ ಪದ ಆರಿಕ್ಕಾಡಿ ಶ್ರೀ ಹನುಮಾನ್ ದೇವಸ್ಥಾನದ ಎರಡು ಕಾಣಿಕೆ ಡಬ್ಬಿಗಳನ್ನು ನಿನ್ನೆ ಕಳ್ಳರು ಒಡೆದು ಅದರಲ್ಲಿದ್ದ ಹಣ ಕಳವುಗೈದಿದ್ದಾರೆ. ಆ ಬಗ್ಗೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿರುವಂತೆಯೇ ಅದೇ ರೀತಿಯ ಕಳವು ಕಾಸರಗೋಡಿನಲ್ಲ್ಲೂ ನಡೆದಿದೆ.
ಕಾಸರಗೋಡನ್ನು ಕೇಂದ್ರೀಕರಿಸಿ ಕಳ್ಳರು ತಂಡವೊಂದು ಠಿಕಾಣಿ ಹೂಡಿದೆ ಎಂದೂ ಅವರು ಹಗಲು ಎಲ್ಲೆಡೆಗಳಲ್ಲೂ ಸಂಚರಿಸಿ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ರಾತ್ರಿ ನುಗ್ಗಿ ಕಳವು ನಡೆಸು ತ್ತಿದ್ದಾರೆ. ಆದ್ದರಿಂದ ವಿಶೇಷವಾಗಿ ಆರಾಧನಾಲಯ, ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳು ಹಾಗೂ ವ್ಯಾಪಾರ ಸಂಸ್ಥೆಗಳು ಗರಿಷ್ಠ ಜಾಗ್ರತೆ ಪಾಲಿಸಬೇಕೆಂಬ ಮುನ್ನೆಚ್ಚರಿಕೆಯನ್ನು ಪೊಲೀಸರು ಇದೇ ಸಂದರ್ಭದಲ್ಲಿ ನೀಡಿದ್ದಾರೆ.