ಸಂಚರಿಸುತ್ತಿದ್ದ ಬಸ್‌ನಲ್ಲಿ ಸ್ವಯಂಭಗ ಯುವತಿಯ ದೂರಿನಂತೆ ಕೇಸು ದಾಖಲು
ಕುಂಬಳೆ: ಸಂಚರಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಯುವತಿಯ ಮುಂದೆ ಯುವಕನೋರ್ವ ನಗ್ನತಾ ಪ್ರದರ್ಶನ ನಡೆಸಿ ಸ್ವಯಂಭಗ ನಡೆಸಿರುವುದಾಗಿ ದೂರುಂಟಾಗಿದೆ. ಘಟನೆಗೆ ಸಂಬಂಧಿಸಿ ೧೯ರ ಹರೆಯದ ಯುವತಿ ನೀಡಿದ ದೂರಿನಂತೆ ಕಂಡರೆ ಪತ್ತೆಹಚ್ಚಬಹುದಾದ ೪೦ರ ಹರೆಯದ ವ್ಯಕ್ತಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ನಿನ್ನೆ ಸಂಜೆ ಕಾಸರಗೋಡಿನಿಂದ ಕುಂಬಳೆಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಘಟನೆ ನಡೆದಿದೆ. ಬಸ್‌ನೊಳಗೆ ಜನರು ಕಿಕ್ಕಿರಿದಿದ್ದರೆಂದು ಹೇಳಲಾಗುತ್ತಿದೆ. ಈ ಮಧ್ಯೆ ಯುವತಿಯ ಎದುರು ಯುವಕ ನಗ್ನತಾ ಪ್ರದರ್ಶನ ನಡೆಸಿ ಬಳಿಕ ಸ್ವಯಂಭೋಗ ನಡೆಸಿದ್ದಾನೆಂದು ದೂರಲಾಗಿದೆ. ಬಸ್ ಕುಂಬಳೆ ಬಸ್ ನಿಲ್ದಾಣಕ್ಕೆ ತಲುಪಿದ ಕೂಡಲೇ ಯುವಕ ಇಳಿದು ಪರಾರಿಯಾಗಿದ್ದಾನೆ. ಬಳಿಕ ಯುವತಿ ಕುಂಬಳೆ ಪೊಲೀಸ್ ಠಾಣೆಗೆ ತಲುಪಿ ದೂರು ನೀಡಿದ್ದಾಳೆ. ಬಸ್‌ನೊಳಗೆ ಕೆಟ್ಟ ರೀತಿಯಲ್ಲಿ ವರ್ತಿಸಿದ ಯುವಕನನ್ನು ಕಂಡರೆ ಪತ್ತೆಹಚ್ಚಲು ಸಾಧ್ಯವಿದೆ ಎಂದು ಯುವತಿ ತಿಳಿಸಿದ್ದಾಳೆ. ಆರೋಪಿಯನ್ನು ಪತ್ತೆಹಚ್ಚಲು ಕುಂಬಳೆ ಬಸ್ ನಿಲ್ದಾಣ ಹಾಗೂ ಸಮೀಪ ಪ್ರದೇಶಗಳ ಸಿಸಿಟಿವಿ ಕ್ಯಮರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.