ಸಂಪೂರ್ಣ ಬಜೆಟ್ ಅಧಿವೇಶನ ಆರಂಭ
ತಿರುವನಂತಪುರ: ಹದಿನೈದನೇ ಕೇರಳ ವಿಧಾನಸಭೆಯ ಹನ್ನೊಂದನೇ ಅಧಿವೇಶನ ಇಂದು ಬೆಳಿಗ್ಗೆ ಆರಂಭಗೊಂಡಿತು. ೨೦೨೪-೨೫ನೇ ಆರ್ಥಿಕ ವರ್ಷದ ರಾಜ್ಯ ಬಜೆಟ್‌ನ್ನು ಅಂಗೀಕರಿಸುವ ಸಂಪೂರ್ಣ ಬಜೆಟ್ ಅಧಿವೇಶನವೂ ಆಗಿದೆ ಇದು.
ಒಟ್ಟು ೨೮ ದಿನಗಳ ತನಕ ಅಧಿವೇಶನ ಮುಂದುವರಿಯಲಿದೆ. ಪ್ರಶ್ನೋತ್ತರ ವೇಳೆ ಇಂದು ಬೆಳಿಗ್ಗೆ ಆರಂಭಗೊಂಡ ಅಧಿವೇಶನದಲ್ಲಿ ಮಂಡಿಸಲ್ಪಟ್ಟ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉತ್ತರ ನೀಡಿದರು. ಪೂಕಾಟ್ ವೆಟರ್ನರೀ ಕಾಲೇಜಿನ ವಿದ್ಯಾರ್ಥಿ ಸಿದ್ಧಾರ್ಥ್‌ನ ಸಾವಿನ ವಿಷಯದ ಕುರಿತಾದ ಸದನದಲ್ಲಿ ವಿಪಕ್ಷಗಳು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುವ ರ‍್ಯಾಗಿಂಗ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು, ಸಿದ್ಧಾರ್ಥ್‌ನ ಸಾವು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸ ಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಈ ವಿಧಾನಸಭಾ ಅಧಿವೇಶನದಲ್ಲಿ ೨೦೨೪ರ ಕೇರಳ ಪಂಚಾಯತ್ ರಾಜ್ (ದ್ವಿತೀಯ ತಿದ್ದುಪಡಿ) ಮತ್ತು ೨೦೨೪ರ ಕೇರಳ ಮುನಿಸಿಪಾಲಿಟಿ (ದ್ವಿತೀಯ ತಿದ್ದುಪಡಿ) ಮಸೂದೆ ಸೇರಿದಂತೆ ಹಲವು ಮಸೂ ದೆಗಳನ್ನು ಸದನದ ಅಂಗೀಕಾರಕ್ಕಾಗಿ ಮಂಡಿಸಲು ಸರಕಾರ ತೀರ್ಮಾನಿಸಿದೆ.