ಸಂಯುಕ್ತ ಟ್ರೇಡ್ ಯೂನಿಯನ್ ಉತ್ತರ ವಲಯ ಜಾಥಾಕ್ಕೆ ಚಾಲನೆ
ಕಾಸರಗೋಡು: ಸಂಯುಕ್ತ ಟ್ರೇಡ್ ಯೂನಿಯನ್‌ನ ಉತ್ತರ ವಲಯ ವಾಹನ ಜಾಥಾಕ್ಕೆ ಕಾಸರಗೋಡಿನಿಂದ ಚಾಲನೆ ನೀಡಲಾಗಿದೆ. ಜುಲೈ ೯ರಂದು ನಡೆಯಲಿರುವ ಸಂಯುಕ್ತ ಟ್ರೇಡ್ ಯೂನಿಯನ್ ಕೆಲಸ ಸ್ಥಗಿತ ಮುಷ್ಕರದ ಪೂರ್ವಭಾವಿಯಾಗಿ ಜಾಥಾ ಆರಂಭಗೊಂಡಿದೆ. ನಾಯಕ, ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್. ಗೋಪಿನಾಥನ್‌ರಿಗೆ ಧ್ವಜ ಹಸ್ತಾಂತರಿಸಿ ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ರಾಜೇಂದ್ರನ್ ಉದ್ಘಾಟಿಸಿದರು. ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಸಜಿಲಾಲ್, ಜಾಥಾ ಮೆನೇಜರ್ ಒ.ಕೆ. ಸಂಧ್ಯಾ, ಸದಸ್ಯರಾದ ಟಿ.ಕೆ. ರಾಜನ್, ಎಲಿಝಬೆತ್ ಅಸೀಹ, ಪಿ.ವಿ. ತಂಬಾನ್, ಎ.ಎನ್. ಸಲೀಂ ಕುಮಾರ್, ಶೀನ್‌ವಳ್ಳಿಲ್, ಒ.ಟಿ. ಸುಜೇಶ್, ಎಂ. ಉಣ್ಣಿಕೃಷ್ಣನ್, ರಸಿಯಾ ಜಾಫರ್, ಹಂಸ ಪುಲ್ಲೋಟಿಲ್, ಆರ್. ಸುರೇಶ್, ವಿ. ಕುಂಞಾಲಿ, ಅಬ್ದುಲ್ ರಹ್ಮಾನ್, ಪಿ. ಕೃಷ್ಣನ್ ನಾಯರ್, ಕೆ. ರವೀಂದ್ರನ್ ಭಾಗವಹಿಸಿದರು.