ಸಂಸತ್‌ನ ಮುಂಗಾರು ಅಧಿವೇಶನಕ್ಕೆ ಚಾಲನೆ: ಕೇಂದ್ರ ಬಜೆಟ್ ನಾಳೆ
ನವದೆಹಲಿ: ಆಡಳಿತಾರೂಢ ಎನ್‌ಡಿಎ ಮೈತ್ರಿ ಕೂಟ ಮತ್ತೆ ಹೊಸ ಶಕ್ತಿಯೊಂದಿಗೆ ಸನ್ನದ್ಧವಾಗಿರುವ ಇಂಡಿಯಾ ಮೈತ್ರಿ ಕೂಟದ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾ ಗುವ ನಿರೀಕ್ಷೆ ಇರುವ ಸಂಪುಟದ ಮುಂಗಾರು ಅಧಿವೇಶನ ಇಂದು ಆರಂಭಗೊಂಡಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ತಮ್ಮ ದಾಖಲೆಯ ಸತತ ೭ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಆರ್ಥಿಕ ಸಮೀಕ್ಷೆ ವರದಿಯನ್ನು ಅವರು ಇಂದು ಸಂಸತ್‌ನಲ್ಲಿ ಮಂಡಿಸಲಿದ್ದಾರೆ.
ಇಂದು ಆರಂಭಗೊಂಡ ಸಂಸತ್‌ನ ಅಧಿವೇಶನ 19 ದಿನಗಳ ಕಾಲ ಮುಂದುವರಿಯಲಿದೆ. ಕೇಂದ್ರದಲ್ಲಿ ಸತತ ಮೂರನೇ ಬಾರಿ ಅಧಿಕಾರಕ್ಕೆ ಬಂದಿ ರುವ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರಕಾರ ಹೊಸ ಕನಸು ಗಳೊಂದಿಗೆ ಭಾರೀ ಬಜೆಟ್ ಮಂಡಿಸ ಲಿದೆ. ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಭಾರೀ ಕೊಡುಗೆ ನೀಡುವ ನಿರೀ ಕ್ಷೆಯೂ ಇದೆ. ಈ ವರ್ಷದ ಫೆಬ್ರವರಿ ಯಲ್ಲಿ 2024-25ನೇ ಸಾಲಿನ ಮಧ್ಯಂತರ ಬಜೆಟ್‌ನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದರು. ಆ ಬಳಿಕ ಲೋಕಸಭಾ ಚುನಾವಣೆ ನಡೆ ದಿತ್ತು. ಈಗ ಹೊಸ ಸರಕಾರ ಅಧಿಕಾರಕ್ಕೆ ಬಂದಿರುವುದರಿಂದ ನಾಳೆ ಪೂರ್ಣ ಬಜೆಟ್ ಅವರು ಮಂಡಿಸುವರು.