ಸಂಸತ್, ಕೆಂಪುಕೋಟೆಯಲ್ಲಿ ಬಾಂಬ್ ಸ್ಫೋಟ ನಡೆಸುವುದಾಗಿ ಖಾಲಿಸ್ತಾನ್ ಉಗ್ರರ ಬೆದರಿಕೆ: ಎಲ್ಲೆಡೆ ಬಿಗಿ ಬಂದೋಬಸ್ತ್

ದೆಹಲಿ: ಸಂಸತ್‌ನ ಬಜೆಟ್ ಅಧಿವೇಶನ ಇಂದು ಆರಂಭಗೊಂಡಿ ರುವಂತೆಯೇ ಸಂಸತ್ ಮತ್ತು ಕೆಂಪುಕೋಟೆ ವಲಯಗಳಲ್ಲಿ ಬಾಂಬ್ ಸ್ಫೋಟ ನಡೆಸುವುದಾಗಿ ಖಾಲಿಸ್ತಾನ್ ಭಯೋತ್ಪಾದಕರು ಬೆದರಿಕೆಯೊಡ್ಡಿದ್ದಾರೆ.

ಸಿಪಿಎಂನ ರಾಜ್ಯ ಸಭಾ ಸದಸ್ಯರಾದ ವಿ. ಶಿವದಾಸನ್ ಮತ್ತು ಎ.ಎ. ರಹೀಂರ ಮೊಬೈಲ್ ಫೋನ್‌ಗೆ ನಿನ್ನೆ ರಾತ್ರಿ ಈ ಬೆದರಿಕೆ ಸಂದೇಶ ಬಂದಿದೆ. ಸಿಖ್ ಫಾರ್ ಜಸ್ಟೀಸ್ ಎಂಬ ಹೆಸರಿನಲ್ಲಿ ಈ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಖಾಲಿಸ್ತಾನ್ ಬೆಂಬಲಿಗರಲ್ಲದಿದ್ದಲ್ಲಿ ಸಂಸದರು ಮನೆಯಲ್ಲಿಯೇ ಕುಳಿತುಕೊಳ್ಳಬೇಕಾಗಿ ದೆಯೆಂಬ ಮುನ್ನೆಚ್ಚರಿಕೆಯನ್ನು ಸಂದೇಶದಲ್ಲಿ ನೀಡಲಾಗಿದೆ. ಈ ಬೆದರಿಕೆ ಸಂದೇಶ ಲಭಿಸಿದಾಕ್ಷಣ ಇಬ್ಬರು ರಾಜ್ಯಸಭಾ ಸದಸ್ಯರು ಆ ಬಗ್ಗೆ ತಕ್ಷಣ ಕೊಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ತಕ್ಷಣ ಕಾರ್ಯನಿರತರಾದ ಪೊಲೀಸರು  ದಿಲ್ಲಿಯಲ್ಲಿರುವ ಈ ಇಬ್ಬರು ರಾಜ್ಯಸಭಾ ಸದಸ್ಯರ ನಿವಾಸಗಳಿಗೆ ಆಗಮಿಸಿ  ಅವರಿಂದ ಅಗತ್ಯದ ಮಾಹಿತಿ ಸಂಗ್ರಹಿಸಿದ್ದಾರೆ. ಮಾತ್ರವಲ್ಲ ಸಂಸತ್ ಮತ್ತು ಸುತ್ತುಮುತ್ತಲ ಪ್ರದೇಶದಲ್ಲಿ ದಿಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಬೆದರಿಕೆ ಸಂದೇಶದ  ಹಿನ್ನೆಲೆ ಬಗ್ಗೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.  ಸಂಸತ್ ಸಂದರ್ಶಿಸುವ ಎಲ್ಲರನ್ನೂ ಸಿಎಸ್‌ಐಎಫ್ ಬಿಗಿ  ಭದ್ರತಾಪಡೆ ಗಳು ತಪಾಸಣೆಗೊಳ ಪಡಿಸಿದ ಬಳಿಕವಷ್ಟೇ ಒಳಗೆ  ಪ್ರವೇಶಿಸಲು ಬಿಡಲಾಗುತ್ತಿದೆ.

You cannot copy contents of this page